ತುಲಾ: ಅಧಿಕಾರ ಪ್ರಾಪ್ತಿ ಯೋಗವಿದೆ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ವ್ಯಾಪಾರಿಗಳಿಗೆ ಉತ್ತಮ ಕಾಲ. ಸ್ನೇಹಿತರಿಂದ ಸಾಲ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ನೀವು ಏನು, ಸಂಸ್ಥೆಗೆ ನಿಮ್ಮ ಅನಿವಾರ್ಯ ಎಷ್ಟಿದೆ ಎಂಬುದನ್ನು ತೋರಿಸುತ್ತೀರಿ. ಅಂಥ ಅವಕಾಶ ಲಭಿಸುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಯೋಗವಿದೆ. ಆದರೆ ಕೆಲ ದಿನಗಳು ಕಾಯ ಬೇಕಾಗಬಹುದು.

ಸರಕಾರಿ ಕೆಲಸ- ಕಾರ್ಯಗಳು ಮಾಡಿಸಬೇಕಿದ್ದಲ್ಲಿ ಸಹ ಅದೇ ಸಮಯದಲ್ಲಿ ಪ್ರಯತ್ನ ಮಾಡಿದರೆ ಯಶಸ್ಸಾಗುವ ಸಾಧ್ಯತೆ ಹೆಚ್ಚು. ಮರೆವು ಬಹಳ ಕಾಡುತ್ತದೆ. ಈ ಹಿಂದೆ ಎಂದೂ ಆಗದ ವಿಧದಲ್ಲಿ ಸಾಲ ರೂಪದಲ್ಲಿ ಹಣ ಕೊಟ್ಟು, ಮರೆತು ಬಿಡುವ ಸಾಧ್ಯತೆಗಳಿವೆ ಎಚ್ಚರ! ನೆಪಪಿಟ್ಟು ಸ್ತ್ರೀಯರಿಂದ ಆದಷ್ಟು ದೂರ ಇರಿ.

Libra Horoscope

ಸ್ತ್ರೀ ಸಹವಾಸ, ಅದರಲ್ಲಿಯೂ ಅಕ್ರಮ ಆಗಿದ್ದಲ್ಲಿ ಭಾರೀ ಮೌಲ್ಯವನ್ನು ತೆರಬೇಕಾಗುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಮರಳಿ ಬರದು ಎಂಬ ಗಾದೆ ಸದಾ ನಿಮ್ಮ ತಲೆಯಲ್ಲಿ ಓಡುತ್ತ ಇರಲಿ. ನೀವು ತೂಕ ಹಾಕಿ, ಎಷ್ಟು ಬೇಕೋ ಅಷ್ಟೇ ಮಾತನಾಡುವವರು. ಆದರೂ ಈಗ ಸ್ವಲ್ಪ ಕಡಿಮೆ ಮಾತನಾಡಿ. ಯಾರಿಗೂ ಏನನ್ನೂ ಮಾಡಿಕೊಡುವುದಾಗಿ ಭರವಸೆ ಕೊಡಬೇಡಿ.

ಸ್ತ್ರೀಯರು: ಪ್ರೀತಿ-ಪ್ರೇಮ-ಪ್ರಣಯ ವಿಚಾರಗಳಿಂದ ದೂರ ಇದ್ದರೆ ನಗು ನಗುತ್ತ ಇರುತ್ತೀರಿ. ಇಲ್ಲ ಆಗಲ್ಲ ಎಂದಾದಲ್ಲಿ ಕಣ್ಣೀರು ಕಟ್ಟಿಟ್ಟ ಬುತ್ತಿ. ಕೆಲ ಅನಿವಾರ್ಯ ವಿಚಾರಗಳನ್ನು ನಿಮ್ಮ ತಂದೆಯವರಿಗೆ ತಿಳಿಸುವ ಪರಿಸ್ಥಿತಿ ಇದ್ದಲ್ಲಿ ಮಾಸಾಂತ್ಯದ ತನಕ ಕಾಯುವುದೇ ಲೇಸು.

ದುಡ್ಡಿಗಾಗಿ ಅಲೆದಾಡುವ, ಪರದಾಡುವ ಸಂದರ್ಭಗಳು ಬರಬಹುದು. ಬೇಸರ ಬೇಡಿ, ಅದು ತಾತ್ಕಾಲಿಕ. ಟೀಕಿಸುವವರಿಗೆ ಯಶಸ್ಸೇ ನಿಮ್ಮ ಆಯುಧ ಆಗಬೇಕು. ಅದು ಈಗ ಸಾಧ್ಯವಿದೆ. ಹಳೆಯ ವಿಚಾರಗಳ್ಯಾವುದನ್ನೂ ಕೆದಕಲು ಹೋಗದಿರಿ. ವಿವಾಹ ಮಾತು-ಕತೆಗಳು ಇದ್ದಲ್ಲಿ ಮುಂದೂಡಿ.

ಚಿಕ್ಕ ಪುಟ್ಟ ವ್ಯವಹಾರ ಮಾಡಲು ಗೃಹೋಪಯೋಗಿ ವಸ್ತುಗಳ ತಯಾರಕರಾಗಿದ್ದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಲಭಿಸುತ್ತದೆ. ಆರ್ಥಿಕ ಸಹಾಯ, ದೂರ ಪ್ರಯಾಣದಿಂದ ಲಾಭ ಎಲ್ಲವೂ ಉತ್ತಮವಾಗಿ ಕಂಡು ಬರುತ್ತಿದೆ. ತಾಯಿಯೊಂದಿಗೆ ಮನಸ್ತಾಪ ಅಥವಾ ಜಗಳ ಆಗುವ ಸಾಧ್ಯತೆಗಳು ಹೆಚ್ಚಿವೆ.

ವಿದ್ಯಾರ್ಥಿಗಳು: ಅವಸರವಾಗಿ ಕಾರ್ಯಗಳನ್ನು ಮಾಡಿ, ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಈ ಬಾರಿ ನಿಮ್ಮ ಬುದ್ಧಿವಂತಿಕೆ ಮಾತುಗಳು ಕಾಪಾಡಲು ಬರುವುದಿಲ್ಲ. ಹೆಚ್ಚಿನ ಹಾಗೂ ಶುದ್ದವಾದ ನೀರು ಸೇವಿಸಿ, ನಿಮ್ಮ ಶರೀರಕ್ಕೆ ಅದರ ಅವಶ್ಯ ಕಾಣುತ್ತಿದೆ. ಕೆಲ ಆರೋಗ್ಯ ವಿಚಾರಗಳನ್ನು ಅಲ್ಲಗಳೆದು ಅಥವಾ ಅಸಡ್ಡೆ ಮಾಡಿ ಅನಾರೋಗ್ಯಕ್ಕೆ ಗುರಿ ಆಗುವ ಸಾಧ್ಯತೆಗಳಿವೆ.

ಮೊಂಡುವಾದ ಮಾಡಬೇಡಿ, ಮೌನ ಹೆಚ್ಚು ಮಾಡಿ. ಶಾಂತವಾಗಿ, ಹಸನ್ಮುಖಿಯಾಗಿ ಉತ್ತರಿಸಲು ಪ್ರಾರಂಭಿಸಿ. ವಿದೇಶ ಪ್ರಯಾಣ ಮಾಡಿ, ಅಲ್ಲಿ ಅಧ್ಯಯನಕ್ಕೆ ಹಣದ ಅಭಾವ ಇದ್ದಲ್ಲಿ ಈಗ ಪ್ರಯತ್ನಿಸಿದರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ. ನಿಮ್ಮ ಪೋಷಕರಿಂದ ಅದರಲ್ಲಿಯೂ ನಿಮ್ಮ ತಂದೆಯವರಿಂದ ಕೆಲಸ- ಕಾರ್ಯ ಆಗಬೇಕು, ಶುಲ್ಕ ಕಟ್ಟಬೇಕು ಅಥವಾ ವಿದ್ಯುತ್ ಉಪಕರಣಗಳನ್ನು ಕೊಡಿಸಬೇಕಾದಲ್ಲಿ ಮಾಸಾಂತ್ಯದ ತನಕ ಕಾಯಲೇಬೇಕು.

ಪರಿಹಾರ: ಪ್ರತೀ ದಿನ ಅಥವಾ ಪ್ರತೀ ಭಾನುವಾರ ಹಸು ಒಂದಕ್ಕೆ ಬಾಳೆಹಣ್ಣು ಅಥವಾ ಬೆಲ್ಲ- ಅಕ್ಕಿ ಅಥವಾ ಈ ಎರಡೂ ಸೇರಿಸಿ ತಿನ್ನಿಸಿ. ಹಸುವಿಗೆ ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ ನಂತರ ನಿಮ್ಮ ಕೆಲಸಗಳಿಗೆ ಹೋಗಿ.

English summary
Get the complete month predictions of June 2017. Read monthly horoscope of Libra in Kannada. Get free monthly horoscope, astrology and monthly predictions in Kannada.
Please Wait while comments are loading...