ಸಿಂಹ : ದೂರ ಪ್ರಯಾಣ ಮಾಡಬೇಡಿ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳ ಮೊದಲರ್ಧ ಭಾಗ ನಿಮಗೆ ಖಂಡಿತ ಸ್ವಲ್ಪ ಉಸಿರು ಕಟ್ಟಿದ ವಾತಾವರಣ ಅನಿಸುತ್ತದೆ. ಆ ಸಮಯದಲ್ಲಿ ದೂರ ಪ್ರಯಾಣ ಮಾಡಬೇಡಿ. ಮಾಡುವ ಅನಿವಾರ್ಯ ಇದ್ದಲ್ಲಿ ನೀವು ಸ್ವತಃ ವಾಹನ ಚಾಲನೆ ಮಾಡ ಬೇಡಿ! ಇದೇ ಸಮಯದಲ್ಲಿ ನಿಮ್ಮ ಶತ್ರುಗಳು ನಿಮಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಅನಿಸಬಹುದು. ಅವರೇ ಗೆಲ್ಲುತ್ತಾರೆ ಅನಿಸಲೂಬಹುದು. ಆದರೆ ತಾಳ್ಮೆ ವಹಿಸಿದಲ್ಲಿ ಮಾತ್ರ ಎಲ್ಲ ಸರಿಹೋಗುತ್ತ ಬರುತ್ತದೆ. ತಿಂಗಳ ಮೊದಲರ್ಧದಲ್ಲಿ ವ್ಯಾಪಾರ ಮಾಡಲೂ ಮನಸಾಗದ ವರ್ತಕರು ಕ್ರಮೇಣ ತಿಂಗಳ ಮುಂದಿನ ಅರ್ಧ ಭಾಗ ಪ್ರಾರಂಭ ಆಗುತ್ತಿದ್ದಂತೆ ವ್ಯಾಪಾರದಲ್ಲಿ ಉತ್ಸಾಹ ತೋರಿಸುತ್ತಾರೆ. ಉತ್ತಮ ಧನ ಲಾಭ ಸಹ ಈ ತಿಂಗಳ ಮಧ್ಯಭಾಗದ ನಂತರವೇ ನಿರೀಕ್ಷಿಸಿ. ನಿಮ್ಮ ಮನಸಿನ ಮೇಲೆ ಯಾರೂ ಹೆಚ್ಚು ಒತ್ತಡ ಹಾಕದಂತೆ ಎಚ್ಚರವಹಿಸಿ. ರಾಜ ಗಾಂಭೀರ್ಯ ಈ ತಿಂಗಳ ಉತ್ತರಾರ್ಧದಲ್ಲಿ ಮತ್ತೆ ನಿಮಗೆ ಲಭಿಸಲಿದೆ. ಅಲ್ಲಿಯ ತನಕ ಸಮಾಧಾನವಿರಲಿ.

Leo

ಸ್ತ್ರೀಯರು
ಈ ತಿಂಗಳು ನೀವು ಕೆಲ ಅಪಮಾನ, ಸೋಲುಗಳನ್ನು ಕಾಣಬೇಕಾದ ಪರಿಸ್ಥಿತಿಗಳಿವೆ. ಕೆಲ ಸ್ತ್ರೀಯರು ಅಪವಾದಗಳನ್ನು ಹಾಗೂ ಕಳಂಕ ಸಹ ಹೊರಬೇಕಾಗಿ ಬರಬಹುದು. ಯಾರನ್ನೂ ಅವಶ್ಯಕತೆಗಿಂತ ಹೆಚ್ಚು ನಂಬದಿರಿ. ಚೀಟಿ ಇತ್ಯಾದಿ ಆರ್ಥಿಕ ವ್ಯವಹಾರವನ್ನು ಮಾಡದೇ ಇದ್ದರೆ ಒಳಿತು. ಗೃಹಿಣಿಯರು ಯಾವುದೇ ಕಾರಣದಲ್ಲಿಯೂ ತಮ್ಮ ಪತಿರಾಯರೊಂದಿಗೆ ಜಗಳ ಆಗದಂತೆ ಎಚ್ಚರ ವಹಿಸುವುದು ಉತ್ತಮ. ಯಾರಾದರೂ ಈ ತಿಂಗಳಿನಲ್ಲಿ ನಿಮ್ಮ ಸ್ನೇಹಿತ ವರ್ಗ ಅಥವಾ ಬಂಧು ವರ್ಗ ಅಥವಾ ನೀವು ಕೆಲಸ ಮಾಡುವ ಜಾಗದಲ್ಲಿ ಹಣದ ಜವಾಬ್ಧಾರಿಯನ್ನು ಕೊಟ್ಟರೆ ಅದನ್ನು ನಿರಾಕರಿಸಿ. ದೂರ ಪ್ರಯಾಣ ಅಥವಾ ಪ್ರವಾಸ ಹೊರಟರೆ ಅದರಲ್ಲಿ ದೇವರ ದರ್ಶನವನ್ನು ಸೇರಿಸಿಕೊಳ್ಳಿ. ಈ ತಿಂಗಳಿನಲ್ಲಿ ನಿಮಗೆ ಸಂತಸ ಹಾಗೂ ಮನಶ್ಶಾಂತಿ ತಿಂಗಳ ಮಧ್ಯ ಭಾಗ ಹಾಗೂ ಅಂತ್ಯ ಭಾಗದಲ್ಲಿ ಲಭಿಸಲಿದೆ ಆದರೆ ಅಲ್ಲಿಯ ತನಕ ತಾಳ್ಮೆ ಇರಲಿ.

ವಿದ್ಯಾರ್ಥಿಗಳು: ಈ ತಿಂಗಳು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಆಗಲಿದೆ. ವಿದ್ಯಾರ್ಥಿನಿಯರಿಗೆ ಸಹ ಈ ತಿಂಗಳು ಸ್ವಲ್ಪ ಕಷ್ಟ, ಆರೋಗ್ಯ ಬಾಧೆಗಳನ್ನು ಅನುಭವಿಸ ಬೇಕಾಗಿ ಬರಬಹುದು. ಧೈರ್ಯವಿರಲಿ.

ಪರಿಹಾರ: ಈ ತಿಂಗಳು ಪ್ರತೀ ದಿನ ದುರ್ಗಾ ಕವಚ ಸ್ತೋತ್ರವನ್ನು ಪಠಿಸಿ ಅಥವಾ ಶ್ರವಣ ಮಾಡಿ.

English summary
Get the complete month predictions of Aprill 2017. Read monthly horoscope of Leo in Kannada. Get free monthly horoscope, astrology and monthly predictions in Kannada.
Please Wait while comments are loading...