ಮಿಥುನ ಮಾರ್ಚ್ ಭವಿಷ್ಯ : ದೇವರ ಮೇಲೆ ನಂಬಿಕೆಯಿಡಿ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು:- ಕೆಲವು ಶುಭ ಹಾಗೂ ಇನ್ನು ಕೆಲವು ಅಶುಭಗಳಿಂದ ಕೂಡಿದ ಮಿಶ್ರ ಫಲದ ಮಾಸ ಇದು ನಿಮಗೆ ಎನ್ನಬಹುದು. ಶಾರೀರಿಕವಾಗಿ ಮಾತ್ರ ಹಿಂದಿನ ತಿಂಗಳಿಗಿಂತ ತುಸು ಹೆಚ್ಚೇ ಚೆನ್ನಾಗಿ ಇರುತ್ತೀರಿ. ದೀರ್ಘಕಾಲಿಕ ರೋಗಗಳು ಇರುವವರು ಸಹ ಈ ತಿಂಗಳು ಸ್ವಲ್ಪ ಮಟ್ಟಿಗಿನ ಚೇತರಿಕೆ ಕಾಣಬಹುದು. ಇಲ್ಲಿ ಚಿಕ್ಕ ವ್ಯತ್ಯಾಸ ಅಂದರೆ ಯಾವುದೇ ಕಾರಣದಲ್ಲಿಯೂ ಸಹ ರಕ್ತಪಾತ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ದೂರದ ಬಂಧುಗಳಿಂದ ಹಾಗೂ ಮಿತ್ರರಿಂದ ಸಹಾಯ ಲಭಿಸುವುದು. ಮಾಸಾಂತ್ಯಕ್ಕೆ ಸರಿದಂತೆ ದ್ವಿಚಕ್ರ ವಾಹನ ಚಾಲಕರು ಎಚ್ಚರಿಕೆ ಅವಶ್ಯ. ವಿದೇಶ ಪ್ರಯಾಣದ ಅನಿವಾರ್ಯತೆ ಇದ್ದಲ್ಲಿ ಕೆಲ ದೇವತಾ ಆರಾಧನೆಗಳನ್ನು ಮಾಡಿಕೊಂಡು ಮುಂದುವರಿಯಿರಿ. ರಾಜಕೀಯದ ನಂಟು ಇರುವವರಿಗೂ ಸ್ವಲ್ಪ ಮಟ್ಟಿಗಿನ ಏರುಪೇರು ಈ ಮಾಸದಲ್ಲಿ ಸಾಧ್ಯವಿದೆ. ವ್ಯಾಪಾರಿಗಳಿಗೆ ಮಾತ್ರ ಈ ತಿಂಗಳು ಶುಭದಾಯಕವೇ ಆಗಿರುತ್ತದೆ. ಅದರಲ್ಲಿಯೂ ಸಹ ಹೋಟೆಲ್ ಉದ್ಯಮ ಹಾಗೂ ವಿದ್ಯುತ್ ಉಪಕರಣಗಳ ಮಳಿಗೆ ಉಳ್ಳವರಿಗೆ ಉತ್ತಮವಿದೆ.

ಸ್ತ್ರೀಯರಿಗೆ:- ವಿಷಯವಿಲ್ಲದೇ ನಿಮ್ಮೊಂದಿಗೆ ಕೆಲ ಸ್ತ್ರೀಯರು ವಾಗ್ವಾದಕ್ಕೆ ಇಳಿಯಬಹುದು. ಕೆಲವರ ನಡವಳಿಕೆ ಈ ತಿಂಗಳು ನಿಮಗೆ ಬೇಸರ ಉಂಟು ಮಾಡುತ್ತದೆ. ಬಾಳಸಂಗಾತಿಯಿಂದ ನೀವು ಅಪೇಕ್ಷಿಸಿದ ವಸ್ತುಗಳು ಈ ತಿಂಗಳು ಪ್ರಾಪ್ತ ಆಗುವುದು ಕಷ್ಟ ಹೆಚ್ಚಿನ ಒತ್ತಾಯ ಮನಸ್ತಾಪ ಹಾಗೂ ಅದೇ ಮುಂದೆ ಜಗಳಕ್ಕೂ ನಾಂದಿ ಹಾಡಬಹುದು. ಆದುದರಿಂದ ಬಾಯಿಗೆ ಹಾಗೂ ಮನಸಿಗೆ ಬೇಗ ಹಾಕಿ. ಈ ತಿಂಗಳು ನಿಮ್ಮಿಂದ ಅತ್ಯಂತ ರುಚಿಕರವಾದ ತಿಂಡಿ ತಿನಿಸುಗಳು ಸಾಧ್ಯವಿದೆ ಇಂಥ ಅವಕಾಶ ಬಿಡಬೇಡಿ ಹೊಸ ಹೊಸ ರುಚಿಗಳನ್ನು ಕಳಿತು ಮಾಡಿ ತಿನ್ನಿಸಿ ಉತ್ತಮ ಹೆಸರು ಪಡೆಯಿರಿ.

monthly horoscope of Gemini

ವಿದ್ಯಾರ್ಥಿಗಳಿಗೆ:- ಸಮಯದ ನಷ್ಟ ವಿದ್ಯಾರ್ಥಿಗಳಾದ ನಿಮಗೆ ಅತ್ಯಂತ ದೊಡ್ಡ ಪ್ರಮಾಣದ ನಷ್ಟವಾಗಿರುತ್ತದೆ ಆದುದರಿಂದ ಆ ವಿಚಾರದಲ್ಲಿ ಹೆಚ್ಚಿನ ಗಮನ ಕೊಡಿ. ನಿಮಗೆ ಅರಿವಿಲ್ಲದಂತೆ ಆಮೇಲೆ ನೋಡೋಣ ಆಮೇಲೆ ಓದೋಣ ಎನ್ನುತ್ತ ಈ ತಿಂಗಳನ್ನು ನೀವು ಸುಖಾಸುಮ್ಮನೇ ಹಾಳು ಮಾಡುವ ಸಾಧ್ಯತೆಗಳಿವೆ. ಹಿರಿಯರ ಮಾತುಗಳಿಗೂ ಸಹ ನೀವು ತೋರ್ಪಡಿಕೆಯ ಗೌರವ ಮಾತ್ರ ತೋರಿಸುತ್ತೀರಿ ಅವರು ಹೇಳುವ ಉಪದೇಶಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಆದರಿಂದ ನಿಮಗೇ ಹೆಚ್ಚಿನ ತೊಂದರೆ ನೆನೆಪಿರಲಿ.

ಪರಿಹಾರಗಳು:- ಈ ತಿಂಗಳು ಪ್ರತೀ ದಿನ ಮನೆಬಳಿ ಇರುವ ಹಸು ಒಂದಕ್ಕೆ ಒಂದು ಬಾಳೆಹಣ್ಣು ತಿನ್ನಿಸಿ ಇಲ್ಲದಿರೆ ಹಸು ಸಾಕುತ್ತಿರುವವರಿಗೆ ಒಂದಿಷ್ಟು ಅಕ್ಕಿ ಹಾಗೂ ಬೆಲ್ಲ ಕೊಡಿಸಿ ಅದನ್ನು ನಿತ್ಯ ಹಸುವಿಗೆ ಕೊಡಲು ಹೇಳಿ

English summary
Get the complete month predictions of February 2017. Read monthly horoscope of Gemini in Kannada. Get free monthly horoscope, astrology and monthly predictions in Kannada.
Please Wait while comments are loading...