ಮಕರ ಮಾರ್ಚ್ ಭವಿಷ್ಯ : ಹಿರಿಯರ ಮಾರ್ಗದರ್ಶನವಿದೆ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರಿಗೆ:- ಹಿಂದಿನ ತಿಂಗಳಿನಂತೆ ಹೆಚ್ಚು ಪ್ರಮಾಣದಲ್ಲಿ ಹಣ ಸಂಪಾದನೆ ಈ ತಿಂಗಳು ದುಡಿಯುವುದು ಕಷ್ಟ ಸಾಧ್ಯ. ಆದುದರಿಂದ ಮನೆಯ ಪ್ರತಿಯೊಂದೂ ಖರ್ಚನ್ನೂ ಸಹ ಗಮನಿಸಿ ಎಲ್ಲಿ ದುಡ್ಡು ಪೋಲಾಗುತ್ತಿದೆ ಎಂದು ತಿಳಿದು ತಕ್ಷಣ ಅದಕ್ಕೆ ಕಡಿವಾಣ ಹಾಕಿ. ಆಟೋಚಾಲಕರು ಎಚ್ಚರದಿಂದಿರಬೇಕು. ಅವರಿಗೆ ಅನಿವಾರ್ಯದ ಖರ್ಚುಗಳು ಹಾಗೂ ಅನಾವಶ್ಯಕ ಮನಸ್ತಾಪಗಳು ಎದುರಾಗಲಿವೆ. ಸರಕಾರೀ ನೌಕರರಿಗೆ ಮಾತ್ರ ನೆಮ್ಮದಿ ಎಂಬುದು ಈಗಷ್ಟೆ ಬರುತ್ತಿರುವಂತೆ ಗೋಚರಿಸುತ್ತದೆ. ತಿಂಗಳ ಮಧ್ಯ ಭಾಗ ಅಂದರೆ ಈ ತಿಂಗಳ 14 ಅಥವಾ 15ರ ನಂತರ ನಿಮ್ಮ ಕೆಲಸಗಳು ತಮ್ಮ ಎಂದಿನ ವೇಗವನ್ನು ಕಳೆದುಕೊಳ್ಳುತ್ತದೆ. ಬರ ಬೇಕಾದ ಹಣ ಬರದೇ ಚಡಪಡಿಸಬೇಕಾಗುತ್ತದೆ. ಹಿರಿಯರಿಂದ ಮಾತ್ರ ಸಲಹೆ ಸೂಚನೆಗಳು ಹಾಗೂ ಅವರ ಆಶೀರ್ವಾದ ನಿಮ್ಮ ಜೊತೆ ಇರುತ್ತದೆ. ಆದುದರಿಂದ ಈ ತಿಂಗಳು ನೀವು ಅಭಿಮನ್ಯುವಿನಂತೆ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೂ ಸಹ ಹಿರಿಯರ ಮಾರ್ಗದರ್ಶನದಂತೆ ಆಚೆಗೆ ಬರುತ್ತೀರಿ. ನಿಮ್ಮನ್ನು ನಿಮ್ಮ ಪರಿಸ್ಥಿತಿಯನ್ನು ನೋಡಿ ಆಡಿಕೊಂಡು ನಗುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಸ್ತ್ರೀಯರು:- ಜೀವನದಲ್ಲಿ ಏಳುಬೀಳುಗಳು ಸರ್ವೇ ಸಾಮಾನ್ಯ ಎನ್ನುವುದರ ಮರೆಯಬೇಡಿ. ಗಡಿಯಾರದಲ್ಲಿ ಕೆಳಗಿಳಿದ ಮುಳ್ಳು ಸಮಯಕ್ಕೆ ತಕ್ಕಂತೆ ಮತ್ತೆ ಮೇಲೆ ಹತ್ತಲೇಬೇಕು. ಉದೋಗ ಮಾಡುತ್ತಿದ್ದಲ್ಲಿ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮಗೆ ಈ ಮಾಸದ ಮಧ್ಯ ಹಾಗೂ ಕೊನೆಯ ಸಮಯದಲ್ಲಿ ನಿಮ್ಮ ಕೀರ್ತಿ ವೃದ್ಧಿಸುತ್ತದೆ. ಅದೇ ವಿಧದಲ್ಲಿ ಅಧಿಕ ಕೆಲಸ ಹಾಗೂ ಅಧಿಕ ಆಯಾಸ ಈ ತಿಂಗಳಿನಲ್ಲಿ ಸರ್ವೇ ಸಾಮಾನ್ಯ ಆಗಿಬಿಡುತ್ತದೆ. ವೈದ್ಯರಿಗೇ ಇನ್ನೊಬ್ಬ ವೈದ್ಯರ ಅಗತ್ಯ ಬಂದೇ ಬರುತ್ತದೆ. ಅನಿರೀಕ್ಷಿತವಾಗಿ ಸಿಟ್ಟು ಸ್ವಲ್ಪ ಜಾಸ್ತಿ ಆಗಬಹುದು. ಸಾರ್ವಜನಿಕ ವಾಹನಗಳ ಉಪಯೋಗಿಸುವಿಕೆ ನಿಮ್ಮಿಂದ ಹೆಚ್ಚುತ್ತದೆ.

monthly horoscope of Capricorn

ವಿದ್ಯಾರ್ಥಿಗಳು:- ಬಹಳದಿನಗಳಿಂದ ನಿಮ್ಮಿಂದ ಕಳೆದು ಹೋಗಿದ್ದ ನಗು ಹಾಗೂ ಹಾಸ್ಯ ಮಾತುಗಳು ಬಂದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಎಲ್ಲರನ್ನು ಸಂತೋಷ ಪಡಿಸಬೇಕೆಂಬ ನಿಮ್ಮ ನಿಲುವಿಗೆ ಎಲ್ಲೆಡೆಯಿಂದ ಸಹಕಾರ ಉತ್ತಮವಾಗಿ ಲಭ್ಯವಾಗುತ್ತದೆ. ನಿಮ್ಮ ಕೆಲಸಗಳಲ್ಲಿ ನಿಮ್ಮ ಸಹೋದರ ಮಧ್ಯಪ್ರವೇಶಿಸಿ ಕೆಲಸ ಕೆಟ್ಟು ನಿಂತಿದೆ.

ಪರಿಹಾರ:- ಪ್ರತೀ ದಿನ ಶ್ರೀ ಲಕ್ಷ್ಮೀ ನೃಸಿಂಹ ಸ್ವಾಮಿಯ ಅಷ್ಟೋತ್ತರವನ್ನು ತಪ್ಪದೇ ಪಠಿಸಿ.

English summary
Get the complete month predictions of February 2017. Read monthly horoscope of Capricorn in Kannada. Get free monthly horoscope, astrology and monthly predictions in Kannada.
Please Wait while comments are loading...