ಕರ್ಕ ಮಾರ್ಚ್ ಭವಿಷ್ಯ : ಆರ್ಥಿಕ ಸಮಸ್ಯೆ ಕಾಡದು

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು:- ಈ ತಿಂಗಳು ಮನೆ ಹಾಗೂ ಸಮಾಜದಲ್ಲಿ ನಿಮ್ಮ ಗೌರವ ವೃದ್ಧಿಸುತ್ತದೆ. ದೂರದ ಪ್ರಯಾಣ ಏನಾದರೂ ಆಲೋಚಿಸಿದ್ದರೆ ಈ ತಿಂಗಳು ನಿಮಗೆ ಉತ್ತಮ. ಕೆಲ ಮಟ್ಟಿಗೆ ಹಣದ ಮುಗ್ಗಟ್ಟುಕಾಣಬಹುದು ಆದರೆ 13ನೇ ತಾರೀಖಿನ ನಂತರ ಸರಿಹೋಗುತ್ತದೆ. ಮಾನಸಿಕವಾಗಿ ಸಹ ಅನವಶ್ಯಕ ಚಿಂತೆಗಳನ್ನು ಮಾಡುತ್ತೀರಿ. ಆಶ್ಚರ್ಯ ಅಂದರೆ ನಿಮ್ಮ ಚಿಂತೆಯ ವಿಷಯ ನಿಮಗೆ ಸಂಬಂಧಿಸಿದ್ದಲ್ಲ! ಕೆಲವೊಮ್ಮೆ ನೆಂಟರಿಷ್ಟರಲ್ಲಿ ಸಹ ಅನಾವಶ್ಯಕ ಮನಸ್ತಾಪ ಹೊದುತೀರಿ. ವ್ಯಾಪಾರಿಗಳಿಗೆ ದುಡ್ಡು ಕಣ್ಣಿಗೆ ಕಾಣುತ್ತದೆ ಆದರೆ ಕೈಗೆ ಸಿಗುವುದಿಲ್ಲ ದೊಡ್ಡ ಪ್ರಮಾಣದಲ್ಲಿ ದುಡ್ಡು ಕೈ ಬದಲಾದರೂ ಸಹ ಕೊನೆಗೆ ನಿಮಗೆ ಉಳಿದ್ದಿದ್ದೇನು ಎಂದು ನೋಡಿದಾಗ ಏನೂ ಇರುವುದಿಲ್ಲ. ಇನ್ನು ಉದ್ಯೋಗಿಗಳಿಗೆ ಅಷ್ಟಾಗಿ ಆರ್ಥಿಕ ಸಮಸ್ಯೆಗಳು ಕಾಡದು ಅವರಿಗೇನಿದ್ದರೂ ಕೆಲಸದ ಒತ್ತಡ ಹೆಚ್ಚಾಗಿ ಮನಸ್ಸು ವಿರಾಮವನ್ನು ಬಯಸುತ್ತಿರುತ್ತದೆ.

ಸ್ತ್ರೀಯರಿಗೆ:-ಆರ್ಥಿಕ ಸ್ವಾವಲಂಬನೆಯತ್ತ ಈ ತಿಂಗಳು ನಿಮ್ಮ ಚಿತ್ತ ಹೆಚ್ಚು ವಾಲುತ್ತದೆ. ಅದಕ್ಕೆ ಕಾರಣ ಸಹ ಈ ತಿಂಗಳ ಆದಿಯಲ್ಲಿ ನೀವು ಅನುಭವಿಸುವ ಕೆಲ ಆರ್ಥಿಕ ಸಮಸ್ಯೆಗಳೇ ಎಂದರೆ ತಪ್ಪಾಗಲಾರದು. ಸಹಾಯ ಮಾಡಬಾರದು ಎಂದು ನೀವು ಈ ಹಿಂದೆ ತೀರ್ಮಾನಿಸಿದವರಿಗೇ ಮತ್ತೆ ಪುನಃ ನೀವೇ ಹೋಗಿ ಸಹಾಯ ಮಾಡಿ ಬರುತೀರಿ. ಕೆಲ ತದ್ವಿರುದ್ದದ ಕೆಲಸಗಳನ್ನು ಈ ತಿಂಗಳು ನೀವು ಮಾಡಿ ಎಲ್ಲರಲ್ಲಿಯೂ ಸಹ ಆಶ್ಚರ್ಯವನ್ನು ಹುಟ್ಟುಹಾಕುತ್ತೀರಿ. ನಿನ್ಗೇನಾಯಿತು? ಎಂದು ಎಲ್ಲ ಕೇಳುವಂತೆ ಮಾಡುತ್ತೀರಿ. ಆದರೆ ಸ್ವಾಭಾವಿಕವಾಗಿಯೇ ನಿಮ್ಮ ಗುಣದಂತೆ ಯಾರು ಎನೇ ಹೇಳಲಿ ನೀವು ಮಾತ್ರ ಅದಕ್ಕೆಲ್ಲಾ ತಲೆ ಕೆಡೆಸಿಕೊಳ್ಳುವುದಿಲ್ಲ.

Cancer monthly horoscope

ವಿದ್ಯಾರ್ಥಿಗಳಿಗೆ:-ಈ ತಿಂಗಳು ಸಿಟ್ಟು ಹಾಗೂ ಮುಂಗೋಪಕ್ಕೆ ದಯಮಾಡಿ ಸ್ವಲ್ಪ ತಡೆ ಮಾಡಿ. ಹಿರಿಯರೊಂದಿಗೆ ಮಾತನಾಡುವಾಗಲೂ ಸಹ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ಹೌದು ನಿಮ್ಮ ತಪ್ಪು ಇಲ್ಲದೇ ನಿಮ್ಮ ಮೇಲೆ ಗೂಬೆ ಕೂರಿಸಿದಾಗ ಸಿಟ್ಟು ಸ್ವಾಭಾವಿಕ ಆದರೂ ಸಹ ಸ್ವಲ್ಪ ತಾಳ್ಮೆಯಿಂದ ಆ ಪರಿಸ್ಥಿತಿಯನ್ನು ಎದುರಿಸಬಹುದು ಎಂಬುದರತ್ತ ಗಮನವಿರಲಿ. ಮುನಿಸಿಕೊಂಡು ಮಾತುಬಿಟ್ಟು ಬಿಟ್ಟರೆ ಸಮಸ್ಯೆ ಪರಿಹಾರ ಆಗೋದಿಲ್ಲ ಎಂಬುದ ನೆನಪಿರಲಿ.

ಪರಿಹಾರ:-ಈ ತಿಂಗಳಿನ ಮೊದಲ ಶನಿವಾರ ಅಥವಾ ಎರಡನೇ ಶನಿವಾರದಂದು ಬೂದಿ ಬಣ್ಣದ ವಸ್ತ್ರದಲ್ಲಿ 5 ಬೊಗಸೆ ಉದ್ದಿನ ಬೇಳೆ ಹಾಕಿ ಗಂಟು ಕಟ್ಟಿ ದೇಗುಲದಲ್ಲಿ ದಾನ ಮಾಡಿ.

English summary
Get the complete month predictions of February 20167. Read monthly horoscope of Gemini in Kannada. Get free monthly horoscope, astrology and monthly predictions in Kannada.
Please Wait while comments are loading...