ಮೇಷ : ಅತಿಯಾದ ಕೆಲಸದ ಒತ್ತಡ, ಲಾಭವೂ ಇಲ್ಲ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳ ಆದಿಯಲ್ಲಿ ಭೂಮಿ ವ್ಯವಹಾರ ಮಾಡುವವರಿಗೆ, ಹೋಟೆಲ್ ಉದ್ಯಮ ನಡೆಸುತ್ತಿರುವವರಿಗೆ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಅತಿಯಾದ ಕೆಲಸದ ಒತ್ತಡ ತೋರಿಸುತ್ತಿದೆ. ಅತಿಯಾದ ಕೆಲಸ ಆದರೂ ದುಡ್ಡು ಮಾತ್ರ ಬರುವುದಿಲ್ಲ. ಒಂದು ಪಕ್ಷ ಬಂದರೂ ಸಹ ಲಾಭ ಕಡಿಮೆ ಅಥವಾ ಇರುವುದೇ ಇಲ್ಲ. ಬರೀ ಅಸಲು ಮಾತ್ರ ಸಿಗುತ್ತದೆ, ಇದು ಬೇಸರಕ್ಕೆ ಕಾರಣವಾಗುತ್ತದೆ. ಈ ತಿಂಗಳಿನಲ್ಲಿ ಸಾಧ್ಯ ಆದಷ್ಟೂ ತಾಳ್ಮೆಯಿಂದ ಇರಿ. ಈ ತಿಂಗಳ ಮಧ್ಯಭಾಗ ಹಾಗೂ ಅಂತ್ಯಭಾಗ ಚೆನ್ನಾಗಿದೆ. ಕೆಲಸ- ಕಾರ್ಯಗಳು ಅದೇ ಸಮಯದಲ್ಲಿ ಚುರುಕುಗೊಳ್ಳುತ್ತವೆ. ವ್ಯಾಪಾರಗಳಲ್ಲಿ ಲಾಭವನ್ನು ಅದೇ ಸಮಯದಲ್ಲಿ ಕಾಣಬಹುದು, ನ್ಯಾಯಾಲದಲ್ಲಿ ದಾವೆಗಳಿದ್ದಲ್ಲಿ ಈ ತಿಂಗಳಾಂತ್ಯ ಆದರೆ ನಿಮಗೆ ಅನುಕೂಲವಾಗಲಿದೆ.

ಸ್ತ್ರೀಯರು: ಈ ತಿಂಗಳು ಆದಿ ನಿಮಗೂ ಅಷ್ಟು ಉತ್ತಮವಾಗಿ ಕಂಡುಬರುತ್ತಿಲ್ಲ. ಗೃಹಿಣಿಯರಿಗೆ ಇತ್ತ ಗಂಡ, ಅತ್ತ ಮಕ್ಕಳು ಇಬ್ಬರೂ ಇವರ ಹತ್ತಿರವೇ ಜಗಳ ಮಾಡಿ, ನಿಮ್ಮದೇ ತಪ್ಪು ಎನ್ನುತ್ತಾರೆ. ಇನ್ನು ತಿಂಗಳ ಮಧ್ಯ ಅಥವಾ ಅಂತ್ಯ ಭಾಗದಲ್ಲಿ ಮಾತ್ರ ಮಕ್ಕಳು ನಿಮ್ಮ ಮಾತು ಕೇಳಬಹುದು ಅಥವಾ ನಿಮ್ಮ ಪರವಾಗಿ ಮಾತನಾಡಬಹುದು. ಯಾವುದೇ ವಿಧದ ಹಣದ ವ್ಯವಹಾರ ಮಾಡುತ್ತಿದ್ದಲ್ಲಿ ಈ ತಿಂಗಳು ಎಚ್ಚರ ಅವಶ್ಯ. ಲಾಭ ಇರೋದಿಲ್ಲ ಅಥವಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಈ ತಿಂಗಳು ಹೊಸ ಬಟ್ಟೆ ಬಂಗಾರ ಇತ್ಯಾದಿ ಏನೇ ಬೇಡಿಕೆ ಇಟ್ಟರೂ ಅದು ನೆರವೇರುವುದು ಮಾತ್ರ ಅನುಮಾನ! ಯಾವುದೇ ಮನಸ್ತಾಪ, ಜಗಳ ಪ್ರಾರಂಭ ಆಗುತ್ತದೆ ಎಂದು ತಿಳಿಯುವಷ್ಟರಲ್ಲಿ ನೀವೇ ಸುಮ್ಮನಿದ್ದು ಬಿಡಿ.

aries monthly horoscope

ವಿದ್ಯಾರ್ಥಿಗಳು: ಮಾರ್ಗದರ್ಶನದ ಕೊರತೆ ನಿಮಗೆ ಈ ತಿಂಗಳು ಕಾಡುತ್ತದೆ. ಹೀಗೇ ಇರಬೇಕು, ಹೀಗೇ ಮಾಡ ಬೇಕು ಎಂದು ಜೊತೆ ಇದ್ದು ದಾರಿ ತೋರಿಸುವವರ ಅಗತ್ಯ ನಿಮಗೆ ಹೆಚ್ಚು ತಿಳಿಯುತ್ತದೆ, ಆದರೆ ದೊರಕುವುದಿಲ್ಲ. ನಿಮಗೆ ಮಾಡಲು ಕೊಟ್ಟ ಕೆಲಸಗಳನ್ನು ಅಪೂರ್ಣ ಮಾಡಿ, ಹೆಸರು ಕೆಡಿಸಿಕೊಳ್ಳಬಹುದು.

ಪರಿಹಾರ: ಈ ತಿಂಗಳು ಪ್ರತೀ ಗುರುವಾರ ಹತ್ತಿರದ ರಾಘವೇಂದ್ರ ಸ್ವಾಮಿಗಳ ಮಠ ಅಥವಾ ಗುರು ಸಾನ್ನಿಧ್ಯ ಇರುವ ಮಂದಿರಗಳಲ್ಲಿ ಪೂಜೆ, ಅಭಿಷೇಕ ಸೇವೆ ಸಲ್ಲಿಸಿ

English summary
Get the complete month prediction for the month of Aprill 2017. Read monthly horoscope of Aries in Kannada. Get free monthly horoscope, astrology and monthly predictions in Kannada.
Please Wait while comments are loading...