ಕುಂಭ: ಆದಾಯಕ್ಕಿಂತಲೂ ಖರ್ಚು ಹೆಚ್ಚು

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಸರಿಯಾಗಿ ಲೆಕ್ಕ ಹಾಕಿದರೆ ನಿಮ್ಮ ಆದಾಯಕ್ಕಿಂತಲೂ ಖರ್ಚು ಹೆಚ್ಚು ಕಾಣಿಸುತ್ತಿದೆ. ಶಾರೀರಿಕವಾಗಿ ಚನ್ನಾಗಿಯೇ ಇರುವ ನೀವು ಮಾಸಾಂತ್ಯದಲ್ಲಿ ಮಾತ್ರ ಉಷ್ಣ ಆಗಿ, ಅನಾರೋಗ್ಯಕ್ಕೆ ತುತ್ತಾಗಬಹುದು. ಅಲ್ಲಿಯೂ ಆಯುರ್ವೇದ ಬಳಕೆ ಮಾತ್ರ ಉತ್ತಮ ಫಲವನ್ನು ನೀಡುತ್ತದೆ.

ಈ ಮೊದಲಿನಿಂದಲೂ ಆಸಿಡಿಟಿಯಿಂದ ಬಳಲುತ್ತಿರುವವರು ಆಹಾರ ಸೇವನೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಅತಿಯಾದ ಖಾರ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಬಳಸಬೇಡಿ. ವ್ಯವಹಾರಗಳ ವಿಚಾರದಲ್ಲಿ ಸಿಟ್ಟು, ಜಗಳ ಮಾಡದೆ ಹೋದರೆ ಈ ವ್ಯವಹಾರ ಮುಂದೆ ನಿಮ್ಮ ಅನುಕೂಲದಂತೆ ಸಾಗದು ಅನಿಸಿದರೆ ಮಾತ್ರ ಸ್ವಲ್ಪ ಸಿಟ್ಟು ಮಾಡಬಹುದು. ಇಲ್ಲದಿದ್ದರೆ ಅದೂ ಬೇಡ, ಜಗಳ ಅಸಲು ಮಾಡಬೇಡಿ.

Aquarius Monthly Horoscope

ಇನ್ನು ಪಿತ್ರಾರ್ಜಿತ ಆಸ್ತಿ ನಿಮಗೆ ಸಿಗುವುದು ಎಂದಾದಲ್ಲಿ ಉತ್ತಮ. ಅದೂ ಈ ತಿಂಗಳ ಮಧ್ಯಭಾಗದ ಒಳಗೆ ಆಗಬೇಕು. ಆಗ ನಿಮಗೆ ಹೆಚ್ಚು ಲಾಭದಾಯಕ. ಹೊಸದೊಂದು ಜಮೀನು ಅಥವಾ ಕಟ್ಟಿದ ಮನೆ ಕೊಂಡುಕೊಳ್ಳುವ ವಿಚಾರಗಳಿದ್ದಲ್ಲಿ ಹೆಚ್ಚು ಒತ್ತಡ, ಪ್ರಯತ್ನ ಹಾಕಿ. ನ್ಯಾಯಾಲಯದಲ್ಲಿ ನಿಮಗೆ ಈ ತಿಂಗಳು ಜಯದ ಸಾಧ್ಯತೆ ಸಹ ಅಲ್ಲಗಳೆಯುವಂತೆ ಇಲ್ಲ.

ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳು ಹೆಚ್ಚಿನ ಜಾಗ್ರತೆಯಿಂದ ಇರಬೇಕು. ಯಾರಿಗೂ ಲಾಭ ಆಸೆಯಿಂದ ಹೆಚ್ಚಿನ ಸಾಲದ ರೂಪದಲ್ಲಿ ಸಾಮಾನು ಕೊಡಬೇಡಿ.

ಸ್ತ್ರೀಯರು: ನಿಮಗೆ ವಿರಾಮ, ವಿಶ್ರಾಂತಿ ಹೇರಳವಾಗಿ ಲಭ್ಯವಿದೆ. ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುವಿರಿ ಎನ್ನುವುದೇ ಮುಖ್ಯವಾಗುತ್ತದೆ. ಸಮಸ್ಯೆಗಳು ಎಲ್ಲರ ಜೀವನದಲ್ಲಿ ಸಾಮಾನ್ಯ. ಹಾಗಂತ ಯಾವಾಗಲೂ ಬೇರೆಯವರ ಸಮಸ್ಯೆಗಳನ್ನೇ ನೆನೆದು ನೆನೆದು ಅದೇ ಕೆಲಸದಲ್ಲಿ ಇದ್ದರೆ ನಿಮ್ಮ ಸಂತಸದ ಸಮಯ ಸಹ ಮೀರಿ ಹೋಗುತ್ತದೆ.

ನೀವು ನಗುವಿಗೆ, ಸಂತಸಕ್ಕೆ ಸಮಯ ನೀಡಬೇಕು. ನಿಮ್ಮ ಸಹಕಾರ ಇದ್ದಲ್ಲಿ ಸಹಾಯ ಮಾಡುವವರಿದ್ದಾರೆ. ಅನಿವಾರ್ಯ ಕಾರಣಗಳು ಯಾವಾಗಲೂ ಇದ್ದೇ ಇರುತ್ತದೆ. ಸಾಲ ಕೊಡಬೇಡಿ ಹಾಗೂ ಸಾಲ ತೆಗೆದುಕೊಳ್ಳಬೇಡಿ, ಬೇರೆಯವರು ಮಾಡುವ ಸಾಲಗಳಿಗೆ ಜಾಮೀನಾಗಿ ನಿಲ್ಲಬೇಡಿ.

ವಿದ್ಯಾರ್ಥಿಗಳು: ವಿದೇಶದಲ್ಲಿ ಅಧ್ಯಯನ ಮಾಡುವ ಆಸಕ್ತಿ ಉಳ್ಳವರಿಗೆ ಈ ತಿಂಗಳಿನಲ್ಲಿ ಅವಕಾಶ ಹೆಚ್ಚು ಲಭಿಸುತ್ತದೆ. ಅದಕ್ಕೆ ಬೇಕಾದ ಸಾಲ ಸೌಲಭ್ಯಗಳು, ಸರಕಾರದಿಂದ ಬೇಕಾಗಿರುವ ಕಾಗದ ಪತ್ರದ ವ್ಯವಸ್ಥೆ ಸಲೀಸಾಗಿ ಲಭಿಸುತ್ತವೆ, ಆದರೆ ವಿದೇಶದಲ್ಲಿ ಉಳಿಯುವ ವ್ಯವಸ್ಥೆ ವಿಚಾರದಲ್ಲಿ ಗಮನ ಹರಿಸಿ. ಇನ್ನು ಉಳಿದ ವಿದ್ಯಾರ್ಥಿಗಳು ಹಿರಿಯರು ಯಾವುದನ್ನಾದರೂ ಅದು ಸರಿ ಇಲ್ಲ ಬೇಡ ಎಂದು ಹೇಳಿದಲ್ಲಿ ಸಿಟ್ಟು ಮಾಡುವುದನ್ನು ಬಿಟ್ಟು ವಿಚಾರ ಮಾಡಲು ಪ್ರಾರಂಭಿಸಿ.

ಪರಿಹಾರ: ಪ್ರತಿ ದಿನ ಅಥವಾ ಪ್ರತಿ ಗುರುವಾರದಂದು ಹತ್ತಿರದ ಅಶ್ವತ್ಥ ವೃಕ್ಷಕ್ಕೆ ಕನಿಷ್ಠ 28 ಅಥವಾ ಗರಿಷ್ಠ 108 ಪ್ರದಕ್ಷಿಣೆ ಹಾಕಿ.

English summary
Get the complete month predictions of May 2017. Read monthly horoscope of Aquarius in Kannada. Get free monthly horoscope, astrology and monthly predictions in Kannada.
Please Wait while comments are loading...