ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು

By ನಾಗನೂರಮಠ ಎಸ್.ಎಸ್
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿಯ ಹೆಸರು ಈಗ ಎಲ್ಲರ ಬಾಯಲ್ಲೂ ಇದೆ. ವಿಶ್ವದಾದ್ಯಂತ ಗಮನ ಸೆಳೆದ ನೋಟು ನಿಷೇಧದ ನಿರ್ಧಾರದಿಂದ ಸಾಕಷ್ಟು ಭ್ರಷ್ಟರಿಗೆ ನರೇಂದ್ರ ಮೋದಿ ಎಂದರೆ ಸಿಂಹ ಸ್ವಪ್ನವಾಗಿದ್ದಾರೆ. ಇದಕ್ಕೆ ಉತ್ತರ ಅವರ ಜಾತಕದಲ್ಲಿ ಸಿಗುತ್ತದೆ. ಏಕೆಂದರೆ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವಂಥಹ ವ್ಯಕ್ತಿತ್ವ ಅವರಿಗೆ ಜನ್ಮದಿಂದಲೇ ಬಂದಿದೆ.

ಕೇವಲ ಚಹಾ ಮಾರುವ ಉದ್ಯೋಗ ಮಾಡಿ ದೇಶದ ಪ್ರಧಾನಿ ಹುದ್ದೆಗೆ ಏರುವಂತಹ ಸಾಮರ್ಥ್ಯ ಹೇಗೆ ಬಂತೆಂಬ ಪ್ರಶ್ನೆ ಸಹಜವಾಗಿಯೇ ಇರುತ್ತದೆ. ಇದಕ್ಕೆ ಮೊದಲು ಕೆಲ ಕಾರಣ ನೀಡಿ ಮುಂದೆ ಹೋಗುವುದು ಒಳ್ಳೆಯದು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದಾದ್ಯಂತ ಪಾನ ನಿಷೇಧ ಮಾಡಿದರು. ಇದರಿಂದ ಎಷ್ಟೋ ಮುತ್ತೈದೆಯರು ಮೋದಿಗೆ ಹರಿಸಿದರು. ಇದೊಂದು ಗಂಟು ಕಟ್ಟಿಟ್ಟುಕೊಳ್ಳುವಂತಹ ಪುಣ್ಯ ಸಂಪಾದನೆ.[ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?]

ಇನ್ನು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಿದರು. ಇದರಿಂದ ಬಡ ಬಗ್ಗರು ಮೋದಿಗೆ ಆಶೀರ್ವದಿಸಿದರು. ಈ ಆಶೀರ್ವಾದಗಳು ಪುಣ್ಯದ ಗಂಟಿನಲ್ಲಿ ಸ್ಥಾನ ಪಡೆದುಕೊಂಡವು. ಮೋದಿಯವರ ಜನ್ಮ ಜಾತಕದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಸಿಗುವ ಮುಖ್ಯಾಂಶಗಳು ಹೀಗಿವೆ.

ಲಗ್ನ-ರಾಶಿ ಎರಡೂ ವೃಶ್ಚಿಕ

ಲಗ್ನ-ರಾಶಿ ಎರಡೂ ವೃಶ್ಚಿಕ

ಮೋದಿಯವರ ಲಗ್ನ ಮತ್ತು ರಾಶಿ ವೃಶ್ಚಿಕವಾಗಿದೆ. ಅನೂರಾಧ ನಕ್ಷತ್ರದ 2ನೇ ಚರಣದಿಂದ ಜನ್ಮ ನಾಮ ನೀ ಬರುತ್ತದೆ. ಹೀಗಾಗಿ ನರೇಂದ್ರ ಎಂದು ಅವರ ಪಾಲಕರು ಹೆಸರಿಟ್ಟಿದ್ದಾರೆ. ಇವರ ನಕ್ಷತ್ರಾಧಿಪತಿ ಶನಿ. ಸಾಮಾನ್ಯವಾಗಿ ಶುಕ್ರವಾರದಂದು ಅವರು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.

ಅದೃಷ್ಟ ಸಂಖ್ಯೆ 8

ಅದೃಷ್ಟ ಸಂಖ್ಯೆ 8

ಜಾತಕದ ಪ್ರಕಾರ 8 ಇವರ ಅದೃಷ್ಟ ಸಂಖ್ಯೆ. ಆದ್ದರಿಂದಲೇ ನವೆಂಬರ್ 8 ರಂದೇ ನೋಟು ನಿಷೇಧದಂಥ ಮಹತ್ವದ ನಿರ್ಧಾರವನ್ನು ದೇಶಕ್ಕೆ ತಿಳಿಸಿದರು. ಮೋದಿಯವರೂ ಮುಹೂರ್ತ ಮತ್ತು ಭವಿಷ್ಯ ನಂಬುತ್ತಾರೆ ಎಂಬುದಕ್ಕೆ ಸಾಕ್ಷಿ. ಇವರಿಗೆ ಅದೃಷ್ಟದ ಹರಳು ಹವಳ. ಆದ್ದರಿಂದ ಒಮ್ಮೆ ಅವರ ಕೈಯನ್ನು ಗಮನಿಸಿ, ಹವಳದುಂಗರವಿರುತ್ತದೆ. ಇದು ಇವರಿಗೆ ಯಶಸ್ಸು ನೀಡುತ್ತಿದೆ. ಸೂರ್ಯೋದಯದ ನಂತರವೇ ಇವರಿಗೆ ಕೆಲವೊಂದು ಶುಭಫಲಗಳು ಬರುತ್ತವೆ.

ಮಂಗಳ ನೀಡಿದ ಧೈರ್ಯ

ಮಂಗಳ ನೀಡಿದ ಧೈರ್ಯ

ಜನ್ಮ ಸಮಯದಲ್ಲಿ ಬುಧನು ತನ್ನ ಸ್ವಕ್ಷೇತ್ರ ಕನ್ಯಾರಾಶಿಯಲ್ಲಿ ಉಚ್ಚನಾಗಿದ್ದಾನೆ. ಆಗ ಕನ್ಯಾ ರಾಶಿಯ ಉತ್ತರಾ ಫಲ್ಗುಣಿ ನಕ್ಷತ್ರವಿತ್ತು. ಇದಕ್ಕೆ ಅಧಿಪತಿ ಸೂರ್ಯ. ಹೀಗಾಗಿ ಮೋದಿ ಸರಕಾರಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಮಂಗಳನು ವೃಶ್ಚಿಕ ರಾಶಿಯಲ್ಲಿದ್ದು, ಇದು ಇವನಿಗೆ ಸ್ವಂತ ಮನೆಯಾಗಿದೆ. ಹೀಗಾಗಿ ಮೋದಿಗೆ ಧೈರ್ಯ ಬಹಳ ಇರುವುದು.

ಶುಕ್ರ-ಶನಿ ಸಂಯೋಗದಿಂದ ಪ್ರಧಾನಿ ಸ್ಥಾನ

ಶುಕ್ರ-ಶನಿ ಸಂಯೋಗದಿಂದ ಪ್ರಧಾನಿ ಸ್ಥಾನ

ರಾಶಿಯಿಂದ ಐದನೇ ಸ್ಥಾನದಲ್ಲಿ ರಾಹು ಇರುವುದರಿಂದ ಸಂಸಾರ ಜೀವನ ಅಷ್ಟಕ್ಕಷ್ಟೇ. ಮೀನದಲ್ಲಿ ರಾಹು ವಿರಾಜಮಾನನಾಗಿದ್ದಾನೆ. ಜೊತೆಗೆ ಜಾತಕದಿಂದ ಐದನೇ ಸ್ಥಾನವನ್ನು ಸಂಸಾರದ ಬಗ್ಗೆ ತಿಳಿದುಕೊಳ್ಳಲು ನೋಡಲಾಗುತ್ತದೆ. ಜನ್ಮರಾಶಿಯಿಂದ ಎಂಟನೇ ಸ್ಥಾನವನ್ನು ದುಃಸ್ಥಾನವೆಂದು ಕರೆಯಲಾಗುತ್ತದೆ. ಆದರೆ ಆ ಸ್ಥಾನದಲ್ಲಿ ಯಾರೂ ಇಲ್ಲ. ಮೇಲಾಗಿ ಮಿಥುನ ರಾಶಿಯು ಎಂಟನೇ ಸ್ಥಾನವಾಗಿರುವುದರಿಂದ ಇದರ ಅಧಿಪತಿಯು ಬುಧನಾಗಿದ್ದಾನೆ. ಅಲ್ಲದೇ ಇವರ ಜಾತಕದಲ್ಲಿ ಬುಧನು ತನ್ನ ಸ್ವಕ್ಷೇತ್ರ ಕನ್ಯಾದಲ್ಲಿ ಹನ್ನೊಂದನೆ ಮನೆಯಲ್ಲಿದ್ದು ಲಾಭದಾಯಕನಾಗಿದ್ದಾನೆ. ಹೀಗಾಗಿ ಆಯುಷ್ಯಕ್ಕೇನೂ ಕೊರತೆಯಿಲ್ಲ. ಜಾತಕದಿಂದ ಹತ್ತನೇ ಸ್ಥಾನದ ಸಿಂಹ ರಾಶಿಯಲ್ಲಿ ಶುಕ್ರ ಮತ್ತು ಶನಿ ಒಟ್ಟಿಗಿದ್ದಾರೆ. ಈ ವಿಶೇಷವೇ ಮೋದಿ ಪ್ರಧಾನಿಯಾಗಲು ಕಾರಣ.

ಕೀರ್ತಿ, ಅಭಿಮಾನಿಗಳು

ಕೀರ್ತಿ, ಅಭಿಮಾನಿಗಳು

ಶುಕ್ರನ ಜೊತೆಗೆ ಶನಿಯು ಇರುವ ಇನ್ನೊಂದು ಲಾಭವೆಂದರೆ ಮೋದಿ ಮೋಡಿ. ವಿಶ್ವದಾದ್ಯಂತ ಹಲವಾರು ಜನರು ಸಿನಿಮಾ ನಟರಿಗಿರುವಂತೆ ಅಪಾರ ಪ್ರಮಾಣದ ಅಭಿಮಾನಿಗಳಿರುವುದು. ಇನ್ನು ಮೋದಿ ಹೆಸರಿನಲ್ಲಿ ಎಷ್ಟೋ ಕಡಿಮೆ ಬೆಲೆಯಲ್ಲಿ ಸಿಗುವ ತಿಂಡಿ ತಿನಿಸುಗಳ 'ನಮೋ' ಎಂದು ಹೆಸರಿಟ್ಟುಕೊಂಡು ಹೋಟೆಲ್ ನಡೆಸುತ್ತಿದ್ದಾರೆ.

ಅಪೂರ್ಣ ಕಾಳ ಸರ್ಪ ದೋಷ

ಅಪೂರ್ಣ ಕಾಳ ಸರ್ಪ ದೋಷ

ಜಾತಕದಲ್ಲಿ ಕೊನೆಯದಾಗಿ ರಾಹು ಮತ್ತು ಶನಿಗಳು ಬರುವುದರಿಂದ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪೂರ್ಣ ಕಾಳಸರ್ಪದೋಷವೆಂದು ಕರೆಯಲಾಗುತ್ತದೆ. ಇದೂ ಮೋದಿಯ ಸಾಂಸಾರಿಕ ಜೀವನ ಸುಗಮ ಆಗಿಲ್ಲದಿರುವುದಕ್ಕೆ ಸಾಕ್ಷಿಯಾಗಿದೆ. ಸನ್ಯಾಸಿ ಜೀವನದ ಗುಣಗಳನ್ನು ಮನಸ್ಸಿಗೆ ತರುವ ಅಪೂರ್ಣ ಕಾಳಸರ್ಪದೋಷದಿಂದಲೇ ಮೋದಿ ಸಾಂಸಾರಿಕ ಜೀವನ ತ್ಯಜಿಸುವ ನಿರ್ಧರಿಸಲು ಕಾರಣವಾಗಿದೆ.

ಭೂಮಿ ಸಂಬಂಧಿ ಕೆಲಸದಲ್ಲಿ ಶುಭ

ಭೂಮಿ ಸಂಬಂಧಿ ಕೆಲಸದಲ್ಲಿ ಶುಭ

ಭಾವ ಕುಂಡಲಿ ಪ್ರಕಾರ ನಾಲ್ಕು ಗ್ರಹಗಳು ಕನ್ಯಾ ರಾಶಿಯಲ್ಲಿಯೇ ಇವೆ. ಬುಧನು ಅಧಿಪತಿ ಆಗಿರುವುದರಿಂದ ಭೂಮಿಗೆ ಸಂಬಂಧಪಟ್ಟ ಕೆಲಸ- ಕಾರ್ಯಗಳಿಗೆ ಶುಭವಾಗುತ್ತದೆ. ಉದಾಹರಣೆಗೆ ಸೈಟ್, ಭೂಮಿ, ಮನೆ ಖರೀದಿಗೆ ಇದು ಶುಭ ನೀಡುತ್ತದೆ. ಇದು ಕೂಡ ಮೋದಿಗೆ ಪ್ರಧಾನಿಯಾಗಲು ಸಹಾಯವಾಗಿದೆ. ಇಡೀ ಭಾರತ ದೇಶದ ಮೋದಿಯ ಅಧಿಕಾರದ ಕೈಯಲ್ಲಿದೆ. ಇದೇ ಸಾಕ್ಷಿ ಜನ್ಮಜಾತಕದಿಂದ ಎಲ್ಲವನ್ನೂ ತಿಳಿದುಕೊಳ್ಳಬಹುದು ಎಂಬುದಕ್ಕೆ.

ಹುಟ್ಟಿದ ಮೂರನೇ ವರ್ಷಕ್ಕೆ ಸಾಡೇಸಾತಿ

ಹುಟ್ಟಿದ ಮೂರನೇ ವರ್ಷಕ್ಕೆ ಸಾಡೇಸಾತಿ

ಮೋದಿ ಹುಟ್ಟಿದ ಮೂರನೇ ವರ್ಷಕ್ಕೆ ಸಾಡೇಸಾತಿಯಲ್ಲಿ ಕಾಲಿಟ್ಟರು. ಈಗ ಮೂರನೇ ಸಾಡೇಸಾತಿಯಾಗಿದೆ. ಇನ್ನು ನಾಲ್ಕನೇ ಸಾಡೇಸಾತಿ ಬರಬೇಕೆಂದರೆ 30 ವರ್ಷಗಳು ಕಳೆಯಬೇಕು. ಇನ್ನು 2020ರ ವರೆಗೆ ಅಂದರೆ ಇನ್ನೂ ಮೂರು ವರ್ಷ ಮೋದಿ ಸಾಡೇಸಾತಿಯಲ್ಲಿಯೇ ಜೀವನ ಕಳೆಯಬೇಕಾಗಿದೆ. 1984ರಲ್ಲಿ ಸಾಡೇಸಾತಿ ಎರಡನೇದಾಗಿ ಬಂದಾಗಲೇ ಮೋದಿ ಸಂಸಾರ ತ್ಯಜಿಸಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ಎಳೆಯ ವಯಸ್ಸಿನಲ್ಲಿ ಸಾಡೇಸಾತಿ ಬಂದಿದ್ದರಿಂದ ಬಹಳಷ್ಟು ಜೀವನದ ಪಾಠಗಳನ್ನು ಕಲಿತುಕೊಳ್ಳುವಂತಾಯಿತು. ಇದರಿಂದ ಮುಂದೆ ಮುಖ್ಯಮಂತ್ರಿಯಾದಾಗ ಅಧಿಕಾರ ನಡೆಸಲು ಬಹಳಷ್ಟು ಅನುಕೂಲವಾಯಿತು. ಈಗ ಪ್ರಧಾನಿಯಾದಾಗಲೂ ಶನಿದೇವನು ಕಲಿಸಿದ ಪಾಠಗಳು ಸಹಾಯ ಮಾಡುತ್ತಿವೆ.

ಮೇಲೇರುತ್ತಾನೆ ಅಥವಾ ನೆಲಕ್ಕೊರಗುತ್ತಾನೆ

ಮೇಲೇರುತ್ತಾನೆ ಅಥವಾ ನೆಲಕ್ಕೊರಗುತ್ತಾನೆ

ಶನಿ ಎಂಟನೇ ಸ್ಥಾನವಾದ ಮಿಥುನ ರಾಶಿಯಲ್ಲಿ ಬಂದಾಗ ಮೋದಿಯು ಗುಜರಾತ್ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಆಡಳಿತ ನಡೆಸಿದರು. 2011ರಲ್ಲಿ ಸಾಡೇಸಾತಿಯು ಮೊದಲ ಹಂತವಾಗಿ ಎರಡನೇ ಬಾರಿ ಬಂದಾಗ ಹಿಂದಿನ ಕರ್ಮಾದಿಗಳ ಫಲ ಲೆಕ್ಕಾಚಾರ ಮಾಡಿ ಪ್ರಧಾನಿ ಹುದ್ದೆಗೇರಿಸಿತು. ಅದಕ್ಕೆ ಹೇಳುವುದು ಸಾಡೇಸಾತಿಯಲ್ಲಿ ವ್ಯಕ್ತಿಯು ಮೇಲೇರುತ್ತಾನೆ ಇಲ್ಲವಾದರೆ ನೆಲಕ್ಕೊರಗುತ್ತಾನೆ.

ಮಾನಸಿಕ ತೊಂದರೆ

ಮಾನಸಿಕ ತೊಂದರೆ

ಶುಕ್ರ ದೆಸೆಯಿದ್ದಾಗ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಈಗ ಚಂದ್ರ ದೆಸೆ ನಡೆಯುತ್ತಿದೆ. ಇದೊಂದು ಸ್ವಲ್ಪ ಮಾನಸಿಕ ತೊಂದರೆ ನೀಡಿದರೂ ನಿರಂತರ ಯೋಗಾಭ್ಯಾಸ ಮಾಡಿದ ಅವರಿಗೆ ಮಾನಸಿಕ ಹಿಂಸೆ ಆಗುವುದು ಕಡಿಮೆ ಎನ್ನಬಹುದು. ಆದರೆ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಬಯ್ಯುವ ಸಂಭವವೂ ಇರುತ್ತದೆ. ಅವರ ಹತ್ತಿರದ ನಿಕಟವರ್ತಿಗಳಿಗೆ ಇದರ ಅನುಭವ ಆಗಿರುತ್ತದೆ. ಆದರೆ ಯಾರೂ ಬೈಸಿಕೊಂಡವರು ಅದರ ಬಗ್ಗೆ ಹೇಳುವುದಿಲ್ಲ.

ಮನೆ ಬಿಡಿಸಿದ ಶನಿ

ಮನೆ ಬಿಡಿಸಿದ ಶನಿ

ಹುಟ್ಟುವಾಗಲೇ ಮೋದಿಯವರಿಗೆ ಶನಿದೆಸೆ ಶುರುವಾಗಿತ್ತು. ಇದರಿಂದ ಮನೆ ಬಿಡುವ ಪ್ರಸಂಗ ಬಂತು. ಬಾಲ್ಯದಲ್ಲಿಯೇ ಸಾಡೇಸಾತಿ ಮತ್ತು ಹುಟ್ಟಿದ ಸಮಯದಲ್ಲಿಯೇ ಶನಿದೆಸೆ ಮೋದಿಯವರು ಸಾಕಷ್ಟು ಕಷ್ಟಪಡಲು ಕಾರಣವಾಯಿತು. ಕೆಲವರು ಹುಟ್ಟುವಾಗಲೇ ಶುಕ್ರದೆಸೆಯಲ್ಲಿ ಹುಟ್ಟಿರುತ್ತಾರೆ. ಉದಾಹರಣೆಗೆ ರಾಹುಲ್ ಗಾಂಧಿ. ಅವರು ಬೆಳ್ಳಿಯ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದು. ಬುಧಾದಿತ್ಯ ಯೋಗ ಮತ್ತು ಇಷ್ಟಬಲ ಯೋಗವೂ ಇರುವುದರಿಂದ ಇವರಿಗೆ ಬಿಜೆಪಿ ಪಕ್ಷದಲ್ಲಿ ಎಂತಹ ಹಿರಿಯರಿದ್ದರೂ ಇವರ ಮಾತು ಕೇಳುವಂತಾಗಿದೆ. ಇನ್ನು ಜನ್ಮ ಕಾಲದಲ್ಲಿ ಗಜಕೇಸರಿ ಯೋಗವಿದ್ದು, ಪ್ರಧಾನಿ ಹುದ್ದೆಗೇರಲು ಅದು ಕೂಡ ಕಾರಣವಾಗಿದೆ.

English summary
India' Prime minister Narendra Modi's birth horoscope highlights by astrologer S.S.Naganooramata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X