ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ

By ಪಂಡಿತ್ ವಿಠ್ಠಲ್ ಭಟ್
|
Google Oneindia Kannada News

ಯಾರು ಏನೇ ಹೇಳಿದರೂ ಮನುಷ್ಯ ಭಾವನಾತ್ಮಕ ಜೀವಿ ಎನ್ನುವುದು ಮಾತ್ರ ಕಟು ಸತ್ಯ. ಆದುದರಿಂದ ನಾವು ಹೇಗೆ, ಯಾವ ಭಾವನೆಯಲ್ಲಿ ಇರುತ್ತೆವೆಯೋ ಹಾಗೆ ನಮಗೆ ಅರಿವಿಲ್ಲದೆಯೆ ಜೀವನ ನಡೆಸುತ್ತಾ ಇರುತ್ತೇವೆ. ಹೀಗಿರುವಾಗ ಅನವಶ್ಯಕವಾದ ಕೆಲವು ವಿಚಾರಗಳನ್ನು ಚಿಂತಿಸುತ್ತಾ ಭಯಭೀತರಾಗುತ್ತೇವೆ, ಯಾಕೆ ಹೀಗೆ?

ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಮನಸಿನ ಆಳ ಸೇರಿಬಿಡುತ್ತದೆ ಇದು. ಭಯ ಎಂಬುದು ಒಮ್ಮೆ ನಮ್ಮ ಮನಸನ್ನು ಸೇರಿದರೆ ಅದು ನಮ್ಮ ನಿತ್ಯ ಜೀವವನ್ನು ಹಿಂಡಿ ಹಿಪ್ಪೆಕಾಯಿ ಮಾಡುತ್ತದೆ. ಎಲ್ಲಿಯ ತನಕ ಈ ಭಯ ನಮ್ಮ ಮಾನ ಹರಾಜು ಹಾಕುತ್ತದೆ ಎಂದರೆ ಅತೀ ಚಿಕ್ಕದಾದ ಹಾಗೂ ಅನವಶ್ಯಕವಾದ ವಿಚಾರಗಳಲ್ಲಿಯೂ ನಾವು ಕೆಲವೊಮ್ಮೆ ಭಯಪಟ್ಟು ಇತರರಿಂದ ನಗೆಪಾಟಲಿಗೀಡಾಗುತ್ತೇವೆ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

Durga

ಅಷ್ಟೇ ಅಲ್ಲ, ಅನವಶ್ಯಕವಾದ ವಿಚಾರಗಳಲ್ಲಿ ಭಯ ಪ್ರದರ್ಶಿಸಿ ನಮಗೆ ನಿಜವಾಗಿಯೂ ಕಷ್ಟದಲ್ಲಿ ಸಹಾಯ ಮಾಡುತ್ತಿದ್ದವರನ್ನೂ ಕಳೆದುಕೊಳ್ಳಬಹುದು. ಇಂಥ ಭಯದಿಂದ ಮುಕ್ತಿ ಪಡೆಯಲು ಹಲವರು ಮಾನಸಿಕ ತಜ್ಞರ ಭೇಟಿ ಮಾಡಿ, ಅವರು ಸಲಹೆ ಕೊಟ್ಟ ಮಾತ್ರೆಗಳನ್ನು ನುಂಗಿ, ಅದರ ವ್ಯತಿರಿಕ್ತ ಪರಿಣಾಮಗಳನ್ನೂ ಎದುರಿಸಿದ್ದಾರೆ.

ಇನ್ನೂ ದುಃಖದ ವಿಚಾರ ಎಂದರೆ ಅಂಥ ವ್ಯತಿರಿಕ್ತ ಪರಿಣಾಮಗಳಿಂದಾಗಿ ಇನ್ನೂ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹಾಗಾದರೆ ಹೀಗೆ ನಾನಾ ವಿಧವಾದ ಭಯದಿಂದ ಮುಕ್ತಿ ಹೇಗೆ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ನಮಗೆ ಸಿಗುವ ಉತ್ತರ ಧ್ಯಾನ ಹಾಗೂ ಪ್ರಾಣಾಯಾಮ.[ಹುಲುಮಾನವನಿಗೆ ಶನಿಯಿಂದ ಬರುವ ರೋಗ ಹಲವಾರು]

ಹಾಗಾದರೆ ಈ ಮಾರ್ಗವೂ ಫಲಕಾರಿ ಅಲ್ಲವೇ ಎಂದರೆ ಅನುಮಾನವೇ ಬೇಡ, ಇದು ಉತ್ತಮ ಫಲಕಾರಿ ವಿಧಾನ. ಆದರೆ ಈ ಭಯ ನಿವಾರಣೆಗೆ ಒಂದು ದೈವೀ ರಹಸ್ಯಕರ ಉಪಾಯವಿದೆ ಅದುವೇ "ಸರ್ವ ಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋSಸ್ತು ತೇ" ಈ ಶ್ಲೋಕದಿಂದ ಸಂಪುಟಿ ವಿಧಾನದಲ್ಲಿ ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಮಾಡಿಸಬೇಕು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆ ನಂತರ ಶ್ರದ್ಧೆಯಿಂದ ಅದರ ಶ್ರವಣ ಮಾಡಿ, ಅಭಿಮಂತ್ರಿತ ತರ್ಪಣ ತೀರ್ಥದ ಪ್ರಾಶನ, ಅರ್ಚನೆ ಮಾಡಿದ ಕುಂಕುಮ ಹಚ್ಚಿಕೊಳ್ಳಬೇಕು ಹಾಗೂ ಅಂದು ಮುತ್ತೈದೆಯರಿಗೆ ಅರಿಶಿನ- ಕುಂಕುಮ, ಫಲ- ತಾಂಬೂಲ ಸಮರ್ಪಿಸಬೇಕು.

English summary
Fear is the key-A divine panacea for all worldly fears. Explained by renowned astrologer Pandit Vittal Bhat. Follow his suggestions and kick the fear out of the window.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X