ನಿತ್ಯ ಭವಿಷ್ಯ - ಏಪ್ರಿಲ್ 28, ಶುಕ್ರವಾರ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಕಳೆದ ಮೂರ್ನಾಲ್ಕು ವರ್ಷಗಳಿಂದ ಜ್ಯೋತಿಷ್ಯ, ಸಾಡೇಸಾತಿ, ಗುರುಬಲ ಸೇರಿದಂತೆ ಇತರೆ ಭವಿಷ್ಯದ ಲೇಖನಗಳನ್ನು ಓದುತ್ತಿರುವ ಸಹೃದಯ ಭಕ್ತ- ಬಾಂಧವರಿಗೆ ವಂದನೆಗಳು.

ನಿತ್ಯ ಭವಿಷ್ಯವನ್ನು ಚಂದ್ರನ ಚಲನೆಯ ಆಧಾರದ ಮೇಲೆ ಕಂಡು ಹಿಡಿಯಲಾಗುತ್ತದೆ. ಹೀಗಾಗಿ ಆಯಾ ರಾಶಿಯಿಂದ ಚಂದ್ರನೆಲ್ಲಿರುತ್ತಾನೋ ಆ ಮನೆಯ ಹಿನ್ನೆಲೆ ಮತ್ತು ಜೊತೆಗಿದ್ದ ಗ್ರಹದ ಫಲಾಫಲಗಳನ್ನು ನೋಡಿಯೇ ದಿನಭವಿಷ್ಯ ಬರೆಯಲಾಗುತ್ತದೆ.

ಪ್ರತಿದಿನವೂ ಒಂದೇ ತರಹವಿದ್ದರೆ ಜೀವನವೇ ಬೇಸರವೆನಿಸುತ್ತದೆ. ಆದ್ದರಿಂದ ನಾಳೆ ಏನಾಗುತ್ತದೆಯೋ ಎಂಬ ಆತಂಕ ಹಲವರಲ್ಲಿರುತ್ತದೆ. ಈ ಆತಂಕ ಹೋಗಲಾಡಿಸಲೆಂದು ನಿತ್ಯ ಭವಿಷ್ಯ ಆರಂಭವಾಗಿದೆ. ಆದ್ದರಿಂದ ಇನ್ಮೇಲೆ ಆಯಾ ರಾಶಿಯವರು ನಿತ್ಯ ಭವಿಷ್ಯದಿಂದ ನಿಮ್ಮ ದಿನದ ಯೋಜನೆಗಳನ್ನು ಹಾಕಿಕೊಳ್ಳಬಹುದು.

Today's Horoscope in Kannada, ಕನ್ನಡದಲ್ಲಿ ಇಂದಿನ ಭವಿಷ್ಯ

ದಿನದ ಪಂಚಾಂಗ

ಮೇಷ: ಹೇಳಿಕೆ ಮಾತುಗಳಿಂದ ಸ್ವಲ್ಪ ಕಿರಿಕಿರಿ, ಮನಸ್ತಾಪ ಸಾಧ್ಯತೆ

ವೃಷಭ: ನನಗೇ ಏಕೆ ಈ ವಿಧವಾಗಿ ಎಲ್ಲರೂ ಕಾಡುತ್ತಿದ್ದಾರೆ ಎಂಬ ದುಃಖ ಕಾಡುತ್ತದೆ

ಮಿಥುನ: ಅಂದವಾಗಿ ಕಾಣಬೇಕು ಎಂದು ಮನಸ್ಸು ಆಶಿಸುತ್ತದೆ

ಕರ್ಕ: ಸಂಗೀತದತ್ತ ಮನಸ್ಸು ಹೆಚ್ಚು ವಾಲುತ್ತದೆ. ಅದೇ ಮನಸಿಗೆ ನೆಮ್ಮದಿ ನೀಡುತ್ತದೆ

ಸಿಂಹ: ಕೆಲವರು ಸಹಾಯ ಕೋರುತ್ತ ನಿಮ್ಮಲ್ಲಿ ಬರಬಹುದು.

ಕನ್ಯಾ: ಅನಿರೀಕ್ಷಿತವಾಗಿ ನಿಮ್ಮ ನಿರೀಕ್ಷೆಗೂ ಹೆಚ್ಚು ದುಡ್ಡು ಉಳಿತಾಯ ಆಗಿಬಿಡುತ್ತದೆ

ತುಲಾ: ಸಾಹಸಮಯ ಕೆಲಸಗಳನ್ನು ಮಾಡೋಣ ಎಂದು ಮನಸ್ಸು ಹಾತೊರೆಯುತ್ತದೆ. ಆದರೆ ನಿಮ್ಮ ಪರಿಸ್ಥಿತಿಗೆ ಅದು ಸೂಕ್ತವಲ್ಲ

ವೃಶ್ಚಿಕ: ದೂರ ಪ್ರಯಾಣಾದಿಗಳನ್ನು ವರ್ಜಿಸಿದರೆ ಉತ್ತಮ

ಧನು: ಇನ್ನೇನು ಲಾಭ ನಿಮ್ಮ ಕೈ ಸೇರಿತು ಅನ್ನುವಷ್ಟರಲ್ಲಿ ನಿಮ್ಮ ಸಿಟ್ಟು ಅದನ್ನು ಹಾಳು ಮಾಡಬಹುದು

ಮಕರ: ದೇವರ ಮೇಲೆ ಭಾರ ಹಾಕಿ ಕೆಲ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯ ಬರಬಹುದು

ಕುಂಭ: ಚಿಕ್ಕಪುಟ್ಟ ಸಾಲಗಳನ್ನು ತೀರಿಸಿ, ನೀವು ಸ್ವಲ್ಪ ನೆಮ್ಮದಿಯನ್ನು ಪಡೆಯುತ್ತೀರಿ

ಮೀನ: ಸ್ನೇಹಿತನೊಡನೆ ಇದ್ದ ಮನಸ್ತಾಪ ಅಥವಾ ಭಿನ್ನಾಭಿಪ್ರಾಯಗಳು ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದಾಗಿ ಹೆಚ್ಚಾಗಬಹುದು

English summary
Daily forecast for your zodiac signs. Get astrological predictions for the day, in Kannada Language by Well known Astrologer Pandit Vittal Bhat.
Please Wait while comments are loading...