ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ವ್ಯಾಪಾರದ ಲಾಭ-ನಷ್ಟಕ್ಕೆ ಕಾರಣ ಮತ್ತು ಪರಿಹಾರ

ನಾನು ವ್ಯಾಪಾರ ಮಾಡಬಹುದಾ? ನನ್ನ ರಾಶಿಯವರಿಗೆ ವ್ಯಾಪಾರ-ವ್ಯವಹಾರ ಆಗಿಬರುತ್ತಾ ಎಂಬುದು ಹಲವಾರು ಜನರ ಪ್ರಶ್ನೆಯಾಗಿರುತ್ತದೆ. ಅದಕ್ಕೆ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಈ ಲೇಖನದಲ್ಲಿ ಉತ್ತರಿಸಿದ್ದಾರೆ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ವ್ಯಾಪಾರಂ ದ್ರೋಹ ಚಿಂತನಂ ಎಂದು ನಮ್ಮ ಶಾಸ್ತ್ರಗಳೇ ಸಾರಿವೆ. ಆದರೆ ಅದನ್ನು ಬಿಟ್ಟರೆ ಮನುಕುಲವೇ ನಿಂತು ಹೋಗುವ ಸಾಧ್ಯತೆಗಳಿವೆ ಎನಿಸುತ್ತದೆ. ಇನ್ನು ವ್ಯಾಪಾರ ಮಾಡಿದರೂ ಅದರಲ್ಲಿಯೂ ನಿಷ್ಠೆ, ಸತ್ಯ ಹಾಗೂ ಪ್ರಾಮಾಣಿಕತೆಯಿಂದ ವ್ಯಾಪಾರ ಮಾಡುವವರು ಹಲವರಿದ್ದಾರೆ.

ಆದರೆ, ಎಷ್ಟು ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೂ ಲಾಭ ಆಗದೆ ನಷ್ಟದ ಮೇಲೆ ನಷ್ಟವೇ ಆದರೆ ಅಥವಾ ಹೊಸದಾಗಿ ವ್ಯಾಪಾರ ಮಾಡುವ ಆಲೋಚನೆ ಇಟ್ಟುಕೊಂಡು ಎನು ಮಾಡುವುದು, ಹೇಗೆ ಮಾಡುವುದು ಹಾಗೂ ಯಾವಾಗ ಪ್ರಾರಂಭ ಮಾಡುವುದು ಎಂಬ ಇತ್ಯಾದಿ ಪ್ರಶ್ನೆಗಳು ಕಾಡಿದಾಗ ನಮಗೆ ಸಹಾಯಕ್ಕೆ ಬರುವುದು ಜ್ಯೋತಿಷ್ಯ ಶಾಸ್ತ್ರ ![ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಯಾರು, ವ್ಯಾಪಾರ ಮಾಡಿ ಜೀವನ ಸಾಗಿಸುತ್ತಾರೆ, ಅದರಲ್ಲಿ ಅವರಿಗೆ ಲಾಭ ಯಾವಾಗ ಆಗುತ್ತದೆ, ಯಾವ ವ್ಯಾಪಾರ ಮಾಡಬೇಕು ಇತ್ಯಾದಿ ವಿಚಾರಗಳನ್ನು ಜಾತಕ ಸೂಕ್ಷ್ಮವಾಗಿ ಗಮನಿಸಿ ಪರಿಶೀಲಿಸಿದರೆ ತಿಳಿಸುತ್ತದೆ. ಉತ್ತಮವಾಗಿ ಲಾಭ ಮಾಡುವ ವ್ಯಾಪಾರ ಮಾಡಲು ಶುಕ್ರ ಗ್ರಹ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ವ್ಯಾಪಾರ ಮಾಡುವ ವ್ಯಕ್ತಿಯ ಜಾತಕದಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿ ಇದ್ದರೆ ಮಾತ್ರ ಲಾಭವನ್ನು ಕಾಣಬಹುದು. ಕೆಲವರಿಗೆ ಶುಕ್ರ ದಶೆ ಇದ್ದರೆ ಸಾಕು ಸಿಕ್ಕಾಪಟ್ಟೆ ದುಡ್ಡು ಬರುತ್ತದೆ, ಲಾಭ ಆಗುತ್ತದೆ ಎನ್ನುವ ಕಲ್ಪನೆ ಇದೆ. ಆದರೆ ಅದು ಅರ್ಧಸತ್ಯ ವಾಕ್ಯ. ಕೇವಲ ಶುಕ್ರ ದಶೆ ಮಾತ್ರ ಇದ್ದರೆ ವ್ಯಾಪಾರದಲ್ಲಿ ಲಾಭ ಮಾಡಲು ಸಾಧ್ಯ ಇಲ್ಲ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ಶುಕ್ರ ಶುಭಕರವಾಗಿರಬೇಕು

ಶುಕ್ರ ಶುಭಕರವಾಗಿರಬೇಕು

ಶುಕ್ರ ದಶೆಯೊಂದಿಗೆ ಜಾತಕದಲ್ಲಿಯೂ ಶುಕ್ರ ಉಚ್ಚ ಸ್ಥಿತಿ ಅಥವಾ ಮಿತ್ರ ಸ್ಥಾನ ಇತ್ಯಾದಿ ಶುಭಕರವಾಗಿ ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಶುಕ್ರನ ವೈರಿ ಆದ ರವಿ ಗ್ರಹದ ದೃಷ್ಟಿ ಆಗಲಿ, ರವಿಯ ಜೊತೆ ಆಗಲಿ ಶುಕ್ರ ಜಾತಕದಲ್ಲಿ ಇದ್ದರೆ ಮತ್ತೆ ವ್ಯಾಪಾರಕ್ಕೆ ಅಥವಾ ವ್ಯಾಪಾರದಲ್ಲಿ ಲಾಭಕ್ಕೆ ಧಕ್ಕೆ ಆಗುತ್ತದೆ.

ಶುಕ್ರ ಸಂಬಂಧಿತ ಸಮಸ್ಯೆ

ಶುಕ್ರ ಸಂಬಂಧಿತ ಸಮಸ್ಯೆ

ಇನ್ನು ಕೆಲವರಿಗೆ ಹಲವು ವರ್ಷಗಳಿಂದ ಲಾಭ ಮಾಡುತ್ತಲಿದ್ದ ವ್ಯಾಪಾರ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ನಷ್ಟದಲ್ಲಿ ಸಿಲುಕುತ್ತದೆ. ಎಷ್ಟು ಪ್ರಯತ್ನ ಮಾಡಿದರೂ ಸಮಸ್ಯೆ ಅಥವಾ ನಷ್ಟದ ಮೂಲ ಹುಡುಕಲು ಆಗದು. ಅದಕ್ಕೆ ಶುಕ್ರ ಸಂಬಂಧಿತ ಹಲವು ಕಾರಣಗಲ್ಲಿ ಒಂದು ಶುಕ್ರ ದಶೆಯ ಅಂತ್ಯ !

ದುಷ್ಪರಿಣಾಮ ಎದುರಿಸಬೇಕು

ದುಷ್ಪರಿಣಾಮ ಎದುರಿಸಬೇಕು

ಹೌದು ವ್ಯಕ್ತಿಯೊಬ್ಬರಿಗೆ ಇಪ್ಪತ್ತು ವರ್ಷ ಕಾಲ ಶುಕ್ರ ದಶೆ ಇರುತ್ತದೆ. ಇನ್ನು ಜಾತಕದಲ್ಲಿಯೂ ಶುಕ್ರ ಅಂಥವರಿಗೆ ಉತ್ತಮ ಸ್ಥಿತಿಯಲ್ಲಿ ಇದ್ದಲ್ಲಿ ಆ ವರುಷಗಳಲ್ಲಿ ವ್ಯಾಪಾರದಲ್ಲಿ ಲಾಭ ಕಾಣುವರು. ಶುಕ್ರ ದಶೆ ಮುಗಿಯುತ್ತಿದ್ದಂತೆ ನಂತರ ರವಿ ದಶೆ ಪ್ರಾರಂಭ ಆಗುವುದರಿಂದ ಇಲ್ಲಿ ರವಿ ಹಾಗೂ ಶುಕ್ರ ಗ್ರಹರು ಪರಸ್ಪರ ವೈರಿಗಳಾಗಿದ್ದು, ಅದರ ದುಷ್ಪರಿಣಾಮ ಆ ವ್ಯಕ್ತಿ ಅನುಭವಿಸ ಬೇಕಾಗುತ್ತದೆ. ಹೀಗೆ ವ್ಯಾಪಾರದಲ್ಲಿ ಯಶಸ್ಸು ಕಾಣಲು ಶುಕ್ರ ಗ್ರಹ ಬಹಳ ಮುಖ್ಯ!

ಯಾವ ವ್ಯಾಪಾರ?

ಯಾವ ವ್ಯಾಪಾರ?

ಇನ್ನು ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡಬೇಕೆಂದಿರುವವರು ಅಥವಾ ಶುಕ್ರನ ತೊಂದರೆ ಇಲ್ಲದೆಯೂ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರು ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಚಾರ ವ್ಯಾಪಾರದ ಆಯ್ಕೆ! ಹೌದು ನೀವು ವ್ಯಾಪಾರ ಮಾಡಬಹುದು ಎನ್ನುವುದು ಸಹ ಪ್ರಾಮುಖ್ಯ ಪಡೆಯುತ್ತದೆ.

ಜಾತಕ ತೋರಿಸಿ ಮುಂದುವರಿಯಿರಿ

ಜಾತಕ ತೋರಿಸಿ ಮುಂದುವರಿಯಿರಿ

ನಿಮ್ಮ ಜಾತಕದಲ್ಲಿ ಶುಕ್ರ ಉತ್ತಮ ಸ್ಥಿತಿಯಲ್ಲಿ ಇದ್ದರೂ ನೀವು ಮಾಡುತ್ತಿರುವ ವ್ಯಾಪಾರದ ವಸ್ತು/ವಿಚಾರ ಇತ್ಯಾದಿಗಳನ್ನು ಸೂಚಿಸುವ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮತ್ತೆ ನಷ್ಟ ನಿಮಗೆ ಕಟ್ಟಿಟ್ಟ ಬುತ್ತಿ. ಆದುದರಿಂದ ನೀವು ವ್ಯಾಪಾರ ಮಾಡುವ ಮೊದಲು ನೀವು ಆಯ್ದ ವ್ಯಾಪಾರ ನಿಮ್ಮ ಜಾತಕದ ಪ್ರಕಾರ ಕೂಡಿ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಯಾವುದು ಮಾಡಬಾರದು

ಯಾವುದು ಮಾಡಬಾರದು

ಉದಾಹರಣೆಗೆ ಜಾತಕದಲ್ಲಿ ಕುಜ ಗ್ರಹ ಉತ್ತಮವಾಗಿ ಇಲ್ಲದ ವ್ಯಕ್ತಿ ರಿಯಲ್ ಎಸ್ಟೇಟ್, ಹೋಟೆಲ್ ಅಥವಾ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡಲು ಹೊರಟರೆ ನಷ್ಟ ಆಗುವ ಸಾಧ್ಯತೆಗಳಿರುತ್ತವೆ. ಗುರು ಅಥವಾ ಬುಧ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದವರು ಔಷಧಾಲಯ, ವೈದ್ಯಶಾಲೆ, ಟ್ಯೂಶನ್ ಅಥವಾ ವಿದ್ಯಾಲಯ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರಗಳನ್ನು ಮಾಡಲು ಹೋಗಬಾರದು.

ಶುಕ್ರನೇ ಜಾತಕದಲ್ಲಿ ಸರಿ ಇಲ್ಲದಿದ್ದರೆ ವ್ಯಾಪಾರ ಬೇಡ

ಶುಕ್ರನೇ ಜಾತಕದಲ್ಲಿ ಸರಿ ಇಲ್ಲದಿದ್ದರೆ ವ್ಯಾಪಾರ ಬೇಡ

ಹಾಗೆಯೇ ಜಾತಕದಲ್ಲಿ ರವಿ ಹಾಗೂ ಶನಿ ಗ್ರಹ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಸರಕಾರದ ಕೆಲಸ ಗುತ್ತಿಗೆ ತೆಗೆದುಕೊಂಡು ರಸ್ತೆ, ಸೇತುವೆ ಇತ್ಯಾದಿಗಳ ನಿರ್ಮಾಣ ಮಾಡುವುದು ಅಥವಾ ಯಾವುದೇ ವಿಧದಲ್ಲಿ ಕಬ್ಬಿಣ ಬಳಸಿ ಮಾಡುವ ನಿರ್ಮಾಣ ಕೆಲಸಗಳಿಗೆ ಕೈ ಹಾಕಿದಲ್ಲಿ ಕೈ ಸುಟ್ಟಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಇನ್ನು ಸ್ವತಃ ಶುಕ್ರನೇ ಸರಿಯಾದ ಸ್ಥಾನದಲ್ಲಿ ಇಲ್ಲದಾಗ ವ್ಯಾಪಾರವನ್ನೇ ಮಾಡಬಾರದು. ಅದರಲ್ಲಿಯೂ ಬಡ್ಡಿಗೆ ಸಾಲ ಕೊಡುವುದು, ಷೇರು ಮಾರುಕಟ್ಟೆ, ಚಲನಚಿತ್ರ ನಿರ್ಮಾಣ ಇತ್ಯಾದಿಗಳಿಂದ ಸಾಧ್ಯವಾದಷ್ಟೂ ದೂರ ಉಳಿಯುವುದು ಸೂಕ್ತ ಎನ್ನಬಹುದು.

ಪರಿಹಾರ ಕ್ರಮಗಳು ಏನೇನು?

ಪರಿಹಾರ ಕ್ರಮಗಳು ಏನೇನು?

ಹವನ: ಹತ್ತು ಆವರ್ತಿ ಪಾರಾಯಣ ಸಹಿತವಾಗಿ ಶುಕ್ಲ ಪಕ್ಷದ ಶುಕ್ರವಾರದಂದು ಸಂಧ್ಯಾ ಅಥವಾ ರಾತ್ರಿ ಕಾಲದಲ್ಲಿ ತ್ರಿಮಧ್ವಾಕ್ತ ಕಮಲ ಪುಷ್ಪಗಳಿಂದ ಲಕ್ಷ್ಮಿನಾರಾಯಣ ಹೃದಯ ಮಂತ್ರ, ಬೀಜಾಕ್ಷರ ಮಂತ್ರಗಳಿಂದ ಹವನ ಮಾಡಿಸುವುದರಿಂದ ವ್ಯಾಪಾರದಲ್ಲಿ ಲಾಭ ಆಗುತ್ತದೆ.
ಪಾರಾಯಣ: ಶುಕ್ರವಾರದಂದು "ಕ್ಷುತ್ಪಿಪಾಸಾಂ ...' ಎಂಬ ಶ್ರೀ ಸೂಕ್ತ ಪೂರ್ಣ ಮಂತ್ರದಿಂದ ಸಂಪುಟೀ ವಿಧಾನದಲ್ಲಿ ಸಪ್ತಶತೀ ಚಂಡಿಕಾ ಪಾರಾಯಣವನ್ನು ಮಾಡಿಸಿ
ರತ್ನ: ಉತ್ತಮ ಗುಣಮಟ್ಟದ lab certified ಆದ "ಜಲ ರತ್ನ" ವನ್ನು ಬೆಳ್ಳಿಯಲ್ಲಿ ಉಂಗುರವಾಗಿಸಿ ಶಾಸ್ತ್ರೋಕ್ತವಾಗಿ ಶುದ್ಧೀಕರಿಸಿ ಹಾಗೂ ತ್ರಿದಿನ ಲಕ್ಷ್ಮಿ ಮೂಲ ಮಂತ್ರಗಳಿಂದ ಅಭಿಮಂತ್ರಿಸಿ ಶುಕ್ರವಾರದಂದು ಧರಿಸಿ
ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲುಕಿನಲ್ಲಿ ಬರುವ ಅರೇಅಂಗಡೀ ಗ್ರಾಮದ ದಟ್ಟ ಅರಣ್ಯದಲ್ಲಿ ನಿಲೆಸಿರುವ ಶ್ರೀ ಕ್ಷೇತ್ರ ಶ್ರೀ ಕರಿಕಾನ ಪರಮೇಶ್ವರೀ ದೇವಿ ದರ್ಶನವನ್ನು ಮಾಡಿ. ಅಲ್ಲಿ ಫಲ ಪಂಚಾಮೃತ ಅಭಿಷೇಕ, ತ್ರಿಶತಿ ಕುಂಕುಮಾರ್ಚನೆ ಮಾಡಿಸಿ. ಆ ನಂತರ ದೇವಿಗೆ ಹೊಸದಾದ ಹಿತ್ತಾಳೆ ತಟ್ಟೆಯಲ್ಲಿ ಅರಿಶಿನದ ಕೊಂಬು 5 ಬೊಗಸೆಯಷ್ಟು ಹಾಕಿ, ತಾಂಬೂಲ ಹಾಗೂ ದಕ್ಷಿಣೆ ಸಹಿತ ಸಮರ್ಪಿಸಿ.
ಗಮನಿಸಿ ಯಾವುದೇ ಪರಿಹಾರ ಮಾಡಿಸುವ ಮೊದಲು ಖುದ್ದು ಭೇಟಿಯಾಗಿ, ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿ. ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು, 9845682380

English summary
What are the reasons for proft or loss in business. Who can do business? What are the sollutions for ill effect of planets, Here astrologer Pandit Vittala Bhat explains according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X