ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಸಮ್ಮೇಳನದಲ್ಲಿ ಸರಳ, ಸ್ವಚ್ಛ ಊಟ

By Mahesh
|
Google Oneindia Kannada News

Simple oota in 77th Kannda Sahitya Sammelana
ಅಡಿಗಾಸ್ ಸಮೂಹದ ವಾಸುದೇವ ಅಡಿಗರ ಸಾರಥ್ಯದಲ್ಲಿ ಕನ್ನಡ ಸಮ್ಮೇಳನದ ಊಟದ ಉಸ್ತುವಾರಿ ಎಂದ ಮೇಲೆ ಭರ್ಜರಿ ಊಟ ಗ್ಯಾರಂಟಿ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಈ ಸಲ ಭಾರಿ ಭೋಜನದ ಬದಲು ಸರಳ, ಸ್ವಚ್ಛ ಹಾಗೂ ಯಥೇಚ್ಛ ಎಂಬ ಧ್ಯೇಯದೊಂದಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಕೆ.ಎನ್ ವಾಸುದೇವ ಅಡಿಗರು ಹೇಳುತ್ತಾರೆ.

ಸಾಮಾನ್ಯವಾಗಿ ಕನ್ನಡ ಅಕ್ಷರ ಜಾತ್ರೆಗಳು ಜ್ಞಾನದ ಹಸಿವಿನ ಜೊತೆಗೆ ಹೊಟ್ಟೆ ಹಸಿವನ್ನು ನೀಗಿಸುತ್ತಿವೆ. ಕಳೆದ ಕೆಲ ವರ್ಷಗಳಿಂದ ಕೊಂಚ ಅವ್ಯವಸ್ಥೆ ಮೂಡಿದ್ದರೂ, ಈಗಲೂ ಇಸವಿ ಸಮೇತವಾಗಿ ಹೋಳಿಗೆ, ಶೇಂಗಾ ಉಂಡೆ, ಪಾಯಸವನ್ನು ನೆನಪಿಸಿಕೊಂಡು ಹೇಳುವವರಿದ್ದಾರೆ.

ಫೆ.4 ರಿಂದ ಮೂರು ದಿನಗಳ ಕಾಲ ನಡೆಯುವ 77ನೇ ಸಾಹಿತ್ಯ ಸಮ್ಮೇಳನಕ್ಕೆ ನಗರದ ನ್ಯಾಷನಲ್ ಕಾಲೇಜು ಮೈದಾನ ಸಜ್ಜುಗೊಳ್ಳುತ್ತಿದೆ. ಸುಮಾರು 3 ಲಕ್ಷ ಜನರ ಊಟೋಪಚಾರದ ವ್ಯವಸ್ಥೆಗೆ ಸ್ಥಳ, ಸಿಬ್ಬಂದಿಯನ್ನು ಈಗಾಗಲೇ ನಿಗದಿ ಪಡಿಸಿ ತರಬೇತಿ ನೀಡಲಾಗಿದೆ.

ಪ್ರತಿನಿಧಿಗಳಿಗೆ ಮಕ್ಕಳ ಕೂಟ ಬಳಿಯ ಹಳೆ ಕೋಟೆ ಆವರಣದಲ್ಲಿ ಹಾಗೂ ಸಾಹಿತಿ ಮತ್ತು ಗಣ್ಯರಿಗೆ ಮಹಿಳಾ ಸೇವಾ ಸಮಾಜದಲ್ಲೂ ಊಟದ ವ್ಯವಸ್ಥೆ ಏರ್ಪಾಟು ಮಾಡಲಾಗಿದೆ. ಸಮ್ಮೇಳನಕ್ಕೆ 250 ರು ನೀಡಿ ನೋಂದಣಿ ಮಾಡಿಕೊಂಡವರು ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಮಾತ್ರ ಊಟೋಪಚರ ಮಾತ್ರ ವ್ಯವಸ್ಥೆ ಮಾಡಲಾಗಿದೆ.

ಮೊದಲ ದಿನ ಫೆ. 4: ಬೆಳಗ್ಗೆ : ಉಪಾಹಾರಕ್ಕೆ ಪೊಂಗಲ್ ಪ್ಲಸ್ ಚಟ್ನಿ ಹಾಗೂ ಕಾಫಿ, ಟೀ
ಮಧ್ಯಾಹ್ನ : ವಾಂಗೀಬಾತ್, ಅನ್ನ ರಸಂ, ಮೈಸೂರು ಪಾಕ್, ಆಂಬೊಡೆ, ಮೊಸರನ್ನ ಹಾಗೂ ಉಪ್ಪಿನಕಾಯಿ
ರಾತ್ರಿಗೆ ಅನ್ನ ಸಾಂಬಾರ್, ಪಾಯಸ, ಮೊಸರು, ಉಪ್ಪಿನಕಾಯಿ ಹಾಗೂ ಹಪ್ಪಳ

ಫೆ.5 ಎರಡನೇ ದಿನ: ಬೆಳಗ್ಗೆ: ಖಾರಾಬಾತ್, ಕೇಸರಿ ಬಾತ್ ಹಾಗೂ ಕಾಫಿ ಟೀ
ಮಧ್ಯಾಹ್ನ: ಬಿಸಿಬೇಳೆ ಬಾತ್, ಜಹಾಂಗೀರ್, ಅನ್ನ ರಸಂ, ಮೊಸರನ್ನ, ಉಪ್ಪಿನಕಾಯಿ ಹಾಗೂ ಪಕೋಡ
ರಾತ್ರಿಗೆ ಅನ್ನ ಸಾಂಬಾರ್, ಪಾಯಸ, ಮೊಸರನ್ನ, ಉಪ್ಪಿನಕಾಯಿ ಹಾಗೂ ಕಡ್ಡಿಹಪ್ಪಳ

ಫೆ. 6 ಕೊನೆ ದಿನ: ಬೆಳಗ್ಗೆ ಶಾವಿಗೆ ಬಾತ್ ಪ್ಲಸ್ ಚಟ್ನಿ ಹಾಗೂ ಕಾಫಿ, ಟೀ
ಮಧ್ಯಾಹಕ್ಕೆ ಮೆಂತ್ಯ ಬಾತ್. ಅನ್ನರಸಂ, ಬಾದುಷಾ, ಮೊಸರನ್ನ ಹಾಗೂ ಉಪ್ಪಿನಕಾಯಿ
ರಾತ್ರಿಗೆ ಅನ್ನ ಸಾಂಬಾರ್, ಮೊಸರನ್ನ, ಉಪ್ಪಿನಕಾಯಿ ಹಾಗೂ ಕಡ್ಡಿ ಹಪ್ಪಳ

ಉಪಹಾರ 20 ಸಾವಿರ ಜನ, ಮಧ್ಯಾಹ್ನಕ್ಕೆ 50 ಸಾವಿರ, ರಾತ್ರಿಗೆ 25 ಸಾವಿರ ಜನಕ್ಕೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ವಾಸುದೇವ್ ಅಡಿಗ ಅವರು ಹೇಳಿದ್ದಾರೆ. [ಕನ್ನಡ ಸಾಹಿತ್ಯ ಸಮ್ಮೇಳನ]

English summary
77th Kannada Sahitya Sammelana Bengaluru will serve simple, clean and plenty of food items said Bengaluru hotel owners association president KN Vasudeva Adiga. He said about 3 lakh representative are likely to attend the three day literature meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X